ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಸಾಮಾಜಿಕ ರಂಗದಲ್ಲಿರುವ ನಿಮಗಿರುವ ಪರಿಚಯ, ಪ್ರಭಾವ ಇಂದು ಉಪಯೋಗಕ್ಕೆ ಬರಲಿದೆ. ಸ್ನೇಹಿತರ ಕಷ್ಟಕ್ಕೆ ಸ್ಪಂದಿಸಲಿದ್ದೀರಿ. ಕೌಟುಂಬಿಕವಾಗಿ ಹೊಸ ವಸ್ತುಗಳ ಖರೀದಿಗೆ ಚಿಂತನೆ ನಡೆಸುವಿರಿ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.ವೃಷಭ: ಕೆಲವೊಂದು ಘಟನೆಗಳು ನಿಮ್ಮ ಜೀವನವನ್ನು ಬದಲಾಯಿಸೀತು. ಉದ್ಯೋಗ ರಂಗದಲ್ಲಿ ಸ್ಥಾನ ಪಲ್ಲಟವಾಗುವ ಸಾಧ್ಯತೆಯಿದೆ. ಆರ್ಥಿಕವಾಗಿ ಧನ ಗಳಿಕೆಗೆ ನಾನಾ ಮಾರ್ಗಗಳನ್ನು ಹುಡುಕಾಡಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.ಮಿಥುನ: ಉದ್ವೇಗದಿಂದ ನಿರ್ಧಾರ ಕೈಗೊಳ್ಳುವ