ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ವೃತ್ತಿರಂಗದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವವರ ಬಗ್ಗೆ ಹುಷಾರಾಗಿರಿ. ಆರ್ಥಿಕವಾಗಿ ಬರಬೇಕಾದ ಬಾಕಿ ಹಣ ಪಾವತಿಯಾಗಲಿದೆ. ಸಾಂಸಾರಿಕವಾಗಿ ಬೇಡದ ಮಾತುಗಳಿಂದ ಮನಸ್ಸು ಹಾಳಾದೀತು. ತಾಳ್ಮೆ, ಸಂಯವಿರಲಿ.ವೃಷಭ: ರಾಜಕೀಯ ರಂಗದಲ್ಲಿರುವವರಿಗೆ ಮುನ್ನಡೆಯ ಯೋಗ ಕೂಡಿಬರಲಿದೆ. ಸ್ಥಾನ ಮಾನ ವೃದ್ಧಿಯಾಗಲಿದೆ. ಆದರೆ ನಿಮ್ಮ ಸಂಗಾತಿಯ ಮುನಿಸಿಗೆ ಕಾರಣವಾಗಬೇಕಾಗುತ್ತದೆ. ಹಿರಿಯರಿಗೆ ಧಾರ್ಮಿಕ ಕ್ಷೇತ್ರಗಳ ಭೇಟಿ ಯೋಗ.ಮಿಥುನ: ಕೋಪದ ಭರದಲ್ಲಿ ತೆಗೆದುಕೊಳ್ಳುವ ನಿರ್ಧಾರದಿಂದ ಉತ್ತಮ