ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಭಾನುವಾರ, 4 ಏಪ್ರಿಲ್ 2021 (08:53 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 

ಮೇಷ: ಹಣಕಾಸಿನ ಹರಿವಿಗೆ ತೊಂದರೆಯಾಗದು. ಆದರೆ ಭವಿಷ್ಯದ ದೃಷ್ಟಿಯಿಂದ ಸರಿಯಾದ ಯೋಜನೆ ಹಾಕಿಕೊಳ‍್ಳುವುದು ಮುಖ್ಯ. ವೃತ್ತಿರಂಗದಲ್ಲಿ ಎಚ್ಚರಿಕೆಯ ಹೆಜ್ಜೆಯಿಡಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.
 
ವೃಷಭ: ಮಹಿಳೆಯರಿಗೆ ಮನೆಗೆ ಅತಿಥಿಗಳನ್ನು ಎದಿರುಗೊಳ್ಳುವ ಸಂಭ್ರಮ. ಇಷ್ಟ ಭೋಜನ ಮಾಡುವ ಯೋಗ ಕೂಡಿಬರಲಿದೆ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚು ವೆಚ್ಚ ಇರಲಿದೆ. ಕುಲದೇವರ ಪ್ರಾರ್ಥನೆ ಮಾಡಿ.
 
ಮಿಥುನ: ವಿದ್ಯಾರ್ಥಿಗಳಿಗೆ ಕಲಿತ ವಿದ್ಯೆಗೆ ತಕ್ಕ ಫಲ ಸಿಗಲಿದೆ. ನಿರುದ್ಯೋಗಿಗಳು ಸ್ವ ಉದ್ಯೋಗದ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಕೃಷಿಕರು ಕೊಡು-ಕೊಳ್ಳುವ ವ್ಯವಹಾರದಲ್ಲಿ ಲಾಭ ಪಡೆಯಲಿದ್ದಾರೆ. ಅನಗತ್ಯ ಚಿಂತೆ ಬೇಡ.
 
ಕರ್ಕಟಕ: ಹಿರಿಯರ ಅಭಿಪ್ರಾಯಗಳಿಗೆ ಬೆಲೆಕೊಡುವುದು ಮುಖ್ಯ. ಅನಿರೀಕ್ಷಿತವಾಗಿ ದೂರ ಪ್ರಯಾಣಕ್ಕೆ ಸಿದ್ಧತೆ ನಡೆಸಬೇಕಾಗುತ್ತದೆ. ವಾಹನ ಸವಾರರು ಚಾಲನೆಯಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ.
 
ಸಿಂಹ: ಹೊಸ ಸಂಬಂಧಗಳು, ಹೊಸ ವ್ಯವಹಾರಗಳು ನಿಮ್ಮಲ್ಲಿ ಹೊಸ ಚೈತನ್ಯವನ್ನು ತರಲಿದೆ. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಗಮನ ಕೊಡುವುದು ಮುಖ್ಯ. ವ್ಯಾಪಾರಿ ವರ್ಗದವರಿಗೆ ಆರ್ಥಿಕವಾಗಿ ಮುನ್ನಡೆಯಿದ್ದರೂ ಹಿತಶತ್ರುಗಳ ಬಗ್ಗೆ ಎಚ್ಚರಿಕೆಯಿರಲಿ.
 
ಕನ್ಯಾ: ನೂತನ ದಂಪತಿಗಳಿಗೆ ಮಧುಚಂದ್ರದ ಭಾಗ್ಯ ಕೂಡಿಬರಲಿದೆ. ಮಹಿಳೆಯರು ಬಹುದಿನಗಳಿಂದ ಕಾದಿದ್ದ ವಸ್ತು ಕೈಗೆ ಬರಲಿದೆ. ನೂತನ ಗೃಹ, ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಬಹುದು. ಕಾರ್ಯನಿಮಿತ್ತ ಕಿರು ಓಡಾಟ ನಡೆಸುವಿರಿ.
 
ತುಲಾ: ಆದಾಯ ಮೀರಿ ಖರ್ಚು ವೆಚ್ಚಗಳು ಕಂಡುಬಂದೀತು. ಗೃಹ ಸಂಬಂಧೀ ವಸ್ತುಗಳ ಖರೀದಿ ಮಾಡಲಿದ್ದೀರಿ. ಮಹಿಳೆಯರಿಗೆ ಕಾರ್ಯದೊತ್ತಡದಿಂದ ಬಿಡುವು ಸಿಗಲಿದೆ. ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಲಿದ್ದೀರಿ.
 
ವೃಶ್ಚಿಕ: ಅವಿವಾಹಿತರಿಗೆ ಶೀಘ‍್ರದಲ್ಲೇ ಸೂಕ್ತ ವೈವಾಹಿಕ ಸಂಬಂಧವನ್ನು ಪಡೆಯಲಿದ್ದಾರೆ. ದೇಹಾರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರಾದರೂ ಆತಂಕಕ್ಕೆ ಕಾರಣವಾದೀತು. ವಿಲಾಸೀ ವಸ್ತುಗಳ ಖರೀದಿ ಮಾಡಲಿದ್ದೀರಿ. ತಾಳ್ಮೆ ಅಗತ್ಯ.
 
ಧನು: ಬೇರೆಯವರ ಬಗ್ಗೆ ಅತಿಯಾದ ಕಾಳಜಿ ತೋರುವುದೂ ನಿಮಗೆ ಸಮಸ್ಯೆಯಾದೀತು. ಅರ್ಚಕ ವೃತ್ತಿಯವರಿಗೆ ಮನ್ನಣೆ ಸಿಗಲಿದೆ. ಸಾಮಾಜಿಕವಾಗಿ ನಿಮ್ಮ ಕೆಲಸಗಳಿಗೆ ಪ್ರಶಂಸೆ ವ್ಯಕ್ತವಾದೀತು. ಆದರೆ ಅತಿಯಾದ ಮುತುವರ್ಜಿ ವಹಿಸಲು ಹೋಗಬೇಡಿ.
 
ಮಕರ: ದೈವಾನುಕೂಲದಿಂದ ಇಂದು ನೀವಂದುಕೊಂಡಿದ್ದ ಕೆಲಸಗಳು ಸುಗಮವಾಗಿ ನೆರವೇರಲಿದೆ. ಆದರೆ ಹಣಕಾಸಿನ ತೊಂದರೆಯಾದೀತು. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಪಡೆಯಲಿದ್ದೀರಿ. ಸಂಗಾತಿಯ ಸಲಹೆ ಸ್ವೀಕರಿಸಿ.
 
ಕುಂಭ: ಸಾಂಸಾರಿಕವಾಗಿ ಹೊಸ ಸಮಸ್ಯೆಗಳನ್ನು ಎದುರಿಸಲು ಸಿದ್ಧವಾಗಬೇಕಾಗುತ್ತದೆ. ಹೊಸ  ವೃತ್ತಿಜೀವನ ಆರಂಭಿಸಿದವರಿಗೆ ಸವಾಲುಗಳು ಎದುರಾಗಲಿವೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಚಿಂತೆ ಬೇಡ.
 
ಮೀನ: ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ಸಂತೋಷ ಸಿಗಲಿದೆ. ಮಹಿಳೆಯರ ಮನೋಕಾಮನೆಗಳು ಪೂರ್ತಿಯಾಗಲಿವೆ. ಕೌಟುಂಬಿಕವಾಗಿ ಅತಿಥಿಗಳ ಆಗಮನಕ್ಕೆ ಸಿದ್ಧವಾಗಿರಿ. ಶುಭ ಮಂಗಲ ಕಾರ್ಯಕ್ಕೆ ಸಿದ್ಧತೆ ನಡೆಸಲಿದ್ದೀರಿ.
ಇದರಲ್ಲಿ ಇನ್ನಷ್ಟು ಓದಿ :