ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಸೋಮವಾರ, 5 ಏಪ್ರಿಲ್ 2021 (09:02 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ದಿಡೀರ್ ಅನಾರೋಗ್ಯದಿಂದಾಗಿ ದೈನಂದಿನ ಕೆಲಸಗಳಲ್ಲಿ ಏರುಪೇರಾಗಲಿದೆ. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳುವುದು ಮುಖ್ಯ. ಖರ್ಚು ವೆಚ್ಚಗಳಾಗಲಿವೆ. ತಾಳ್ಮೆಯಿರಲಿ.
 
ವೃಷಭ: ಬಹುದಿನಗಳ ನಿಮ್ಮ ಕನಸು ನನಸಾಗಿಸಲು ಇದು ಸಕಾಲ. ಆರ್ಥಿಕವಾಗಿ ಆದಾಯ ವೃದ್ಧಿಯಾಗಲಿದೆ. ವ್ಯವಹಾರದಲ್ಲಿ ಮುನ್ನಡೆ ಕಂಡುಬರಲಿದೆ. ಇಷ್ಟಮಿತ್ರರ ಆಗಮನ ಮನಸ್ಸಿಗೆ ಖುಷಿಕೊಡಲಿದೆ. ಚಿಂತೆ ಬೇಡ.
 
ಮಿಥುನ: ಸಹೋದರ ವರ್ಗದವರಿಂದ ಆಸ್ತಿ ವಿಚಾರವಾಗಿ ವೈಮನಸ್ಯ ಮೂಡಿಬಂದೀತು. ಹಿರಿಯರ ಅಭಿಪ್ರಾಯಗಳಿಗೆ ಬೆಲೆಕೊಡುವುದು ಮುಖ್ಯ. ಉದರ ಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬಂದೀತು. ಎಚ್ಚರಿಕೆಯಿಂದಿರಿ.
 
ಕರ್ಕಟಕ: ನಿಮ್ಮ ಮಾತೇ ನಿಮಗೆ ಇಂದು ಅಸ್ತ್ರವಾಗಲಿದೆ. ವೃತ್ತಿರಂಗದಲ್ಲಿ ನಿಮ್ಮ ವಾಕ್ಚಾತುರ್ಯದಿಂದ ಎಲ್ಲರ ಮನಸ್ಸು ಗೆಲ್ಲಲಿದ್ದೀರಿ. ಆದರೆ ಯಾರಿಗೂ ಇಂದು ಸಾಲ ಕೊಡಲು ಹೋಗಬೇಡಿ, ಮರಳಿ ಬಾರದು. ಎಚ್ಚರಿಕೆಯಿರಲಿ.
 
ಸಿಂಹ: ವ್ಯಾಪಾರಿ ವರ್ಗದವರಿಗೆ ಆರ್ಥಿಕವಾಗಿ ಚೇತರಿಕೆಯಿದ್ದರೂ ಶತ್ರು ಕಾಟ ಕಂಡುಬಂದೀತು. ಸರಕಾರಿ ಉದ್ಯೋಗಿಗಳು ಅನಿರೀಕ್ಷಿತ ವರ್ಗಾವಣೆಗೆ ಸಿದ್ಧರಾಗಬೇಕಾಗುತ್ತದೆ. ಯೋಗ್ಯ ವಯಸ್ಕರು ಸೂಕ್ತ ಸಂಬಂಧಕ್ಕೆ ಕೆಲವು ದಿನ ಕಾಯುವುದು ಉತ್ತಮ.
 
ಕನ್ಯಾ: ಮಕ್ಕಳ ಮನಸ್ಸಿನ ಖುಷಿಗಾಗಿ ಕೆಲವೊಂದು ವಸ್ತು ಖರೀದಿಸಲಿದ್ದೀರಿ. ಆರ್ಥಿಕವಾಗಿ ಖರ್ಚು ವೆಚ್ಚಗಳಾಗಲಿವೆ. ಹಣ ಗಳಿಕೆಗೆ ನಾನಾ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಸಂಗಾತಿಯ ಸಲಹೆಯನ್ನು ಪಾಲಿಸಿದರೆ ಉತ್ತಮ.
 
ತುಲಾ: ಅತಿಯಾಗಿ ಇನ್ನೊಬ್ಬರ ಮೇಲೆ ಅವಲಂಬಿಸುವುದು, ವಿಶ್ವಾಸವಿಟ್ಟುಕೊಳ್ಳುವುದರಿಂದ ಮನಸ್ಸಿಗೆ ಘಾಸಿಯಾಗವು ಸಂದರ್ಭ ಎದುರಾದೀತು. ವೃತ್ತಿರಂಗದಲ್ಲಿ ಜವಾಬ್ಧಾರಿಗಳು ಹೆಚ್ಚಲಿವೆ. ವೈಯಕ್ತಿಕ ಆರೋಗ್ಯದ ಬಗ್ಗೆ ಗಮನವಿರಲಿ.
 
ವೃಶ್ಚಿಕ: ಶಿಕ್ಷಕ ವರ್ಗದವರಿಗೆ ಉದ್ಯೋಗದಲ್ಲಿ ಕಾರ್ಯದೊತ್ತಡವಿರಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ನಾನಾ ಖರ್ಚು ಕಂಡುಬರಲಿದೆ. ಮಹಿಳೆಯರಿಗೆ ಉದ್ಯೋಗದಲ್ಲಿ ಸ್ಥಾನ ಪಲ್ಲಟ ಸಾಧ‍್ಯತೆ. ಕುಲದೇವರ ಪ್ರಾರ್ಥನೆ ಮಾಡಿ.
 
ಧನು: ಮಕ್ಕಳ ಆರೋಗ್ಯ ಚಿಂತೆಗೆ ಕಾರಣವಾಗಲಿದೆ. ಪ್ರೀತಿ ಪಾತ್ರರೊಂದಿಗೆ ಕೆಲವು ದಿನ ಕಳೆಯುವ ಮನಸ್ಸಾಗಲಿದೆ. ಅವಿವಾಹಿತರಿಗೆ ಶೀಘ‍್ರ ಕಂಕಣ ಬಲ ಕೂಡಿಬರಲಿದೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು.
 
ಮಕರ: ನಿಮ್ಮ ಮನಸ್ಸಿಗೆ ಹಿಡಿಸಿದ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ವೈಯಕ್ತಿ ದೇಹಾರೋಗ್ಯವನ್ನು ನಿರ್ಲಕ್ಷಿಸಬೇಡಿ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗವಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ.
 
ಕುಂಭ: ನೀವು ಅತೀವ ಇಷ್ಟ ಪಡುವ ವಸ್ತು ನಿಮ್ಮ ಕೈಯಿಂದಲೇ ನಾಶವಾಗಿ ಬೇಸರವಾದೀತು. ಕ್ರಿಯಾತ್ಮಕವಾಗಿ ಯೋಚನೆ ಮಾಡುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಸಂಗಾತಿಗೆ ಉಪಯುಕ್ತ ಸಲಹೆ ನೀಡಲಿದ್ದೀರಿ. ಚಿಂತೆ ಬೇಡ.
 
ಮೀನ: ಎಷ್ಟೋ ದಿನಗಳಿಂದ ಅಂದುಕೊಂಡಿದ್ದ ಕೆಲಸಗಳನ್ನು ಪೂರ್ತಿ ಮಾಡಲಿದ್ದೀರಿ. ವೃತ್ತಿರಂಗದಲ್ಲಿ ಎಲ್ಲಾ ರೀತಿಯಿಂದ ಅಭಿವೃದ್ಧಿ ಕಂಡುಬರಲಿದೆ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆ ಬರುವುದು.
ಇದರಲ್ಲಿ ಇನ್ನಷ್ಟು ಓದಿ :