ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಬುಧವಾರ, 7 ಏಪ್ರಿಲ್ 2021 (08:30 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 

ಮೇಷ: ಅನಿರೀಕ್ಷಿತವಾಗಿ ಅಂದುಕೊಂಡ ಕೆಲಸಗಳು ನೆರವೇರಲಿದೆ. ಕಷ್ಟದ ಸಮಯದಲ್ಲಿ ಯಾರೂ ಕೈ ಹಿಡಿಯುತ್ತಿಲ್ಲ ಎನ್ನುವ ಬೇಸರ ಕಾಡೀತು. ಆದರೆ ಆತ್ಮವಿಶ್ವಾಸದಿಂದ ಮುನ್ನಡೆಯಬೇಕಿದೆ. ಸಾಂಸಾರಿಕವಾಗಿ ಹೊಂದಾಣಿಕೆ ಅಗತ್ಯ.
 
ವೃಷಭ: ನಿಮ್ಮ ಪ್ರಯತ್ನ ಶೀಲತೆಗೆ ತಕ್ಕ ಮನ್ನಣೆ ಸಿಗಲಿದೆ. ಇನ್ನೊಬ್ಬರ ಮೇಲಿನ ಅತಿಯಾದ ಅನುಮಾನ ಒಳ್ಳೆಯದಲ್ಲ. ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಸುಧಾರಣೆ ಕಂಡುಕೊಳ್ಳಲು ಅವಕಾಶ ಸಿಗಲಿದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಮಿಥುನ: ನಿಮ್ಮ ಕಷ್ಟಕ್ಕೆ ಆಪ್ತರು ಹೆಗಲುಕೊಡಲಿದ್ದಾರೆ. ಉದ್ಯೋಗ ಕ್ಷೇತ್ರದಲ್ಲಿ ಮುಂಬಡ್ತಿಗೆ ನೀವು ಇದುವರೆಗೆ ಪಟ್ಟ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಹಿರಿಯರಿಗೆ ತೀರ್ಥಯಾತ್ರೆಗೆ ಹೋಗುವ ಯೋಜನೆ ಮುಂದೂಡಬೇಕಾಗಿ ಬರಲಿದೆ.
 
ಕರ್ಕಟಕ: ವೃತ್ತಿರಂಗದಲ್ಲಿ ಹೊಂದಾಣಿಕೆಯಿಂದ ನಡೆದುಕೊಂಡಲ್ಲಿ ಎಲ್ಲವೂ ನೀವಂದುಕೊಂಡಂತೇ ನಡೆಯುವುದು. ಅನಿರೀಕ್ಷಿತ ತಿರುವುಗಳಿಂದ ಜೀವನದಲ್ಲಿ ಬದಲಾವಣೆಗಳಾದೀತು. ಮಹಿಳೆಯರಿಗೆ ಶೀತ ಸಂಬಂಧೀ ಆರೋಗ್ಯ ಸಮಸ್ಯೆಯಾದೀತು.
 
ಸಿಂಹ: ಆತುರದ ನಿರ್ಧಾರಗಳಿಂದ ಕೈಸುಟ್ಟುಕೊಳ್ಳಬೇಕಾದ ಪರಿಸ್ಥಿತಿ ಬಂದೀತು. ನೂತನ ಗೃಹ ನಿರ್ಮಾಣ ಕೆಲಸಗಳಿಗೆ ಕೈಹಾಕಲು ಕೆಲವು ದಿನ ಕಾಯುವುದು ಉತ್ತಮ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಭರವಸೆ ಸಿಗಲಿದೆ.
 
ಕನ್ಯಾ: ಪ್ರೀತಿ ಪಾತ್ರರ ಅನಾರೋಗ್ಯ ಚಿಂತೆಗೆ ಕಾರಣವಾಗಲಿದೆ. ಸಂಗಾತಿಯ ಸಲಹೆಗಳು ಉಪಯೋಗಕ್ಕೆ ಬರಲಿದೆ. ಆರ್ಥಿಕವಾಗಿ ಅಧಿಕ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ಮಕ್ಕಳಿಂದ ಸಂತೋಷ ಅನುಭವಿಸಲಿದ್ದೀರಿ.
 
ತುಲಾ: ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ ಅನುಭವಿಸಬೇಕಾಗಿ ಬಂದೀತು. ಮನಸ್ಸಿನ ಮಾತುಗಳಿಗೆ ಕಿವಿಗೊಟ್ಟು ಮುನ್ನಡೆಯಿರಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ದೇವತಾ ಪ್ರಾರ್ಥನೆ ಮಾಡಿ.
 
ವೃಶ್ಚಿಕ: ಪ್ರೀತಿ ಪಾತ್ರರ ಯೋಗ ಕ್ಷೇಮಕ್ಕಾಗಿ ಕೆಲವೊಂದು ತ್ಯಾಗ ಮಾಡಬೇಕಾಗುತ್ತದೆ. ಯಾವುದೇ ವಸ್ತುವಿನ ಮೇಲೆ ಅತಿಯಾದ ವ್ಯಾಮೋಹ ಬೇಡ. ವಿದ್ಯಾರ್ಥಿಗಳಿಗೆ ಕಠಿಣ ಪರೀಕ್ಷೆ ಎದುರಾಗಲಿದೆ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.
 
ಧನು: ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವುದರಿಂದ ಮನಸ್ಸಿನ ಭಾರ ಕೊಂಚ ಹಗುರವಾಗಲಿದೆ. ಬೇರೆಯವರ ಕಷ್ಟಕ್ಕೆ ಸ್ಪಂದಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಬೇಡಿ. ನೆರೆಹೊರೆಯವರೊಂದಿಗೆ ನೀರಿಗಾಗಿ ವಾಗ್ವಾದ ನಡೆದೀತು. ಎಚ್ಚರ.
 
ಮಕರ: ಪತ್ನಿಯ ಮನದಾಸೆ ಪೂರೈಸಲು ಪ್ರಯತ್ನಪಡಲಿದ್ದೀರಿ. ನೂತನ ದಂಪತಿಗಳಲ್ಲಿ ಹೊಂದಾಣಿಕೆ ಕೊರತೆ ಕಂಡುಬಂದೀತು. ಹಿರಿಯರ ಸಲಹೆ ಪಾಲಿಸಿರಿ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಲಾಭ ಗಳಿಸಲು ಅವಕಾಶ ಸಿಗಲಿದೆ.
 
ಕುಂಭ: ಅನಗತ್ಯವಾಗಿ ಮಾನಸಿಕವಾಗಿ ಚಿಂತೆ ಮಾಡುವುದರಿಂದ ಕೆಲಸದಲ್ಲಿ ಉತ್ಸಾಹ ಕಳೆದುಕೊಳ್ಳಲಿದ್ಧೀರಿ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗವಿದೆ. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಿ.
 
ಮೀನ: ನಾವು ಎಣಿಸಿದ ರೀತಿಯಲ್ಲಿ ಕಾರ್ಯಗಳು ನಡೆಯುತ್ತಿಲ್ಲ ಎಂಬ ಭಾವನೆ ಕಾಡಲಿದೆ. ಸಾಂಸಾರಿಕವಾಗಿ ನಿಮ್ಮ ಮಾತಿನಿಂದ ಭಿನ್ನಾಭಿಪ್ರಾಯಗಳಾಗದಂತೆ ಎಚ್ಚರಿಕೆ ವಹಿಸಿ. ಕಾರ್ಯನಿಮಿತ್ತ ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.
ಇದರಲ್ಲಿ ಇನ್ನಷ್ಟು ಓದಿ :