ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಗುರುವಾರ, 8 ಏಪ್ರಿಲ್ 2021 (08:28 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 

ಮೇಷ: ದೇಹಾರೋಗ್ಯದಲ್ಲಿ ಏರುಪೇರಾಗಲಿದ್ದು, ಮಾನಸಿಕವಾಗಿ ಚಿಂತೆಯಾಗಲಿದೆ. ಕೌಟುಂಬಿಕವಾಗಿ ಹಲವು ಚಿಂತೆಗಳಿಂದ ಕಿರಿ ಕಿರಿಯಾದೀತು. ಉದ್ಯೋಗ ಕ್ಷೇತ್ರದಲ್ಲಿ ಕೊಂಚ ಬಿಡುವಿನ ಸಮಯ ಸಿಗುವುದು. ದೇವತಾ ಪ್ರಾರ್ಥನೆ ಮಾಡಿ.
 
ವೃಷಭ: ವೃತ್ತಿರಂಗದಲ್ಲಿ ನಿಮ್ಮ ಭವಿಷ್ಯ ನಿರ್ಧರಿಸುವಂತಹ ಘಟನೆಗಳು ನಡೆದೀತು. ಮೇಲಧಿಕಾರಿಗಳೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಿ. ನಿಮ್ಮ ಸಮಸ್ಯೆಗಳಿಗೆ ಸಂಗಾತಿಯು ಹೆಗಲುಕೊಡಲಿದ್ದಾರೆ. ಚಿಂತೆ ಬೇಡ.
 
ಮಿಥುನ: ವೈಯಕ್ತಿಕ ಸಮಸ್ಯೆಗಳನ್ನು ಪ್ರೀತಿ ಪಾತ್ರರೊಂದಿಗೆ ಹಂಚಿಕೊಂಡು ಹಗುರವಾಗಲಿದ್ದೀರಿ. ಪ್ರೀತಿ ಪಾತ್ರರ ವಿಚಾರದಲ್ಲಿ ಅನಾದರಣೆ ತೋರಿದರೆ ತಕ್ಕ ಫಲ ಅನುಭವಿಸಬೇಕಾದೀತು. ಕುಲದೇವರ ಪ್ರಾರ್ಥನೆ ನಡೆಸಿ.
 
ಕರ್ಕಟಕ: ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಬೇಡ. ಯೋಗ್ಯ ವಯಸ್ಕರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.
 
ಸಿಂಹ: ಸಾಂಸಾರಿಕವಾಗಿ ಹಲವು ಸಮಸ್ಯೆಗಳಿಂದ ದೇಹ, ಮನಸ್ಸು ಹೈರಾಣಾದೀತು. ವ್ಯಾಪಾರಿ ವರ್ಗದವರು ಕೊಂಚ ಸಮಾಧಾನದ ನಿಟ್ಟುಸಿರುವ ಬಿಡಲಿದ್ದಾರೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ.
 
ಕನ್ಯಾ: ಅನವಶ್ಯಕ ಖರ್ಚು ವೆಚ್ಚಗಳು ಕಂಡುಬರಲಿದೆ. ಆರ್ಥಿಕವಾಗಿ ಹಣ ಗಳಿಕೆಗೆ ನಾನಾ ಮಾರ್ಗಗಳನ್ನು ಕಂಡುಕೊಳ‍್ಳಲಿದ್ದೀರಿ. ಕಾರ್ಯಕ್ಷೇತ್ರದಲ್ಲಿ ವೈಫಲ್ಯದ ಭೀತಿ ಕಾಡೀತು. ಸಹೋದ್ಯೋಗಿಗಳ ನೆರವು ಪಡೆಯಲಿದ್ದೀರಿ.
 
ತುಲಾ: ಸರಕಾರಿ ನೌಕರರಿಗೆ ಆದಾಯ ಮೂಲಕ್ಕೆ ಪೆಟ್ಟು ಬೀಳಲಿದೆ. ಕೋರ್ಟು ಕಚೇರಿ ಕೆಲಸಗಳಿಗಾಗಿ ಓಡಾಟ ನಡೆಸಲಿದ್ದೀರಿ. ನಿರುದ್ಯೋಗಿಗಳು ಸ್ವಯಂ ಉದ್ಯೋಗದ ಬಗ್ಗೆ ಯೋಚನೆ ಮಾಡಲಿದ್ದೀರಿ. ದಿನದಂತ್ಯಕ್ಕೆ ನೆಮ್ಮದಿ.
 
ವೃಶ್ಚಿಕ: ನೆರೆಹೊರೆಯವರ ಚಾಡಿ ಮಾತುಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಅಂದುಕೊಂಡ ಕೆಲಸ ಪೂರ್ತಿ ಮಾಡಿ. ಸ್ವಯಂ ಉದ್ಯೋಗಿಗಳಿಗೆ ಮುನ್ನಡೆಯ ಯೋಗ ಕಂಡುಬರಲಿದೆ. ಅವಿವಾಹಿತರಿಗೆ ಶೀಘ್ರ ವಿವಾಹ ಪ್ರಾಪ್ತಿಯಾಗಲಿದೆ.
 
ಧನು: ಬೇರೆಯವರ ವಿಚಾರದಲ್ಲಿ ಅತೀವ ಕುತೂಹಲವೂ ಒಳ್ಳೆಯದಲ್ಲ. ಮಕ್ಕಳ ದೇಹಾರೋಗ್ಯ ಚಿಂತೆಗೆ ಕಾರಣವಾದೀತು. ಶೈಕ್ಷಣಿಕ ವೃತ್ತಿಯವರಿಗೆ ಮುನ್ನಡೆಯ ಯೋಗವಿದೆ. ಆದಾಯ ವೃದ್ಧಿಗೆ ದಾರಿ ಕಂಡುಕೊಳ್ಳಲಿದ್ದೀರಿ. ತಾಳ್ಮೆಯಿರಲಿ.
 
ಮಕರ: ಪ್ರೀತಿ ಪಾತ್ರರೊಂದಿಗೆ ಸುಂದರ ಕ್ಷಣ ಕಳೆಯುವ ಯೋಗ ನಿಮ್ಮದಾಗಲಿದೆ. ಇಷ್ಟಮಿತ್ರರೊಂದಿಗೆ ಪ್ರವಾಸ, ಭೋಜನ ಮಾಡಲಿದ್ದೀರಿ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿಗೆ ಖರ್ಚುವೆಚ್ಚಗಳಾದೀತು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಕುಂಭ: ನೀವು ಬಹುವಾಗಿ ಪ್ರೀತಿಸುತ್ತಿದ್ದ ವಸ್ತುವೊಂದು ನಿಮ್ಮ ಕೈಬಿಟ್ಟು ಹೋಗಲಿದೆ. ಹಳೆಯ ಮಿತ್ರರನ್ನು ಭೇಟಿಯಾದ ಸಂತೋಷ ಸಿಕ್ಕೀತು. ಸಂಗಾತಿಯ ಕೆಲವೊಂದು ಬೇಡಿಕೆ ಪೂರೈಸಲು ಮಂದಾಗಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.
 
ಮೀನ: ಮಹಿಳೆಯರಿಗೆ ಸಾಂಸಾರಿಕ ಸುಖ ಸಂತೋಷಕ್ಕೆ ಕೊರತೆಯಿರದು. ಆದರೆ ದೇಹಾರೋಗ್ಯದ ಬಗ್ಗೆಯೂ ಕಾಳಜಿವಹಿಸುವುದು ಸೂಕ್ತ. ನಿರುದ್ಯೋಗಿಗಳು ಉದ್ಯೋಗ ಸಂಬಂಧವಾಗಿ ದೂರ ಸಂಚಾರ ಮಾಡಲಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :