ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಕಾರ್ಯರಂಗದಲ್ಲಿ ಸ್ವಾಭಿಮಾನ ಬದಿಗೊತ್ತಿ ಮುಂದುವರಿಯಬೇಕಾದರೆ ಯಶಸ್ಸು ಸಿಗಬೇಕಾದರೆ ಅದಕ್ಕೆ ತಕ್ಕ ಪರಿಶ್ರಮವೂ ಪಡಬೇಕು. ಆರ್ಥಿಕವಾಗಿ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಖರ್ಚು ಮಾಡಬೇಕು.ವೃಷಭ: ಕೌಟುಂಬಿಕವಾಗಿ ಮನೆಯಲ್ಲಿ ಸಂತೋಷದ ವಾತಾವರಣವಿರಲಿದೆ. ಸಾವಧಾನದಿಂದ ಯೋಚನೆ ಮಾಡಿದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.ಮಿಥುನ: ಧನಾಗಮನದಲ್ಲಿ ವಿಳಂಬವಾಗುವುದರಿಂದ ಅಂದುಕೊಂಡ ಕೆಲಸಗಳು ಪೂರ್ತಿಯಾಗದು. ಮನೆಯಲ್ಲಿ ಶುಭ ಮಂಗಲ ಕಾರ್ಯ