ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನಿಮ್ಮ ವರಮಾನದಲ್ಲಿ ಕೊಂಚ ಸುಧಾರಣೆಯಾಗಲಿದೆ. ನಿಧಾನವಾಗಿ ಸಹಜ ಸ್ಥಿತಿಗೆ ಮರಳಲಿದ್ದೀರಿ. ದೈಹಿಕ ಆರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಯೋಜನೆ ರೂಪಿಸಲಿದ್ದೀರಿ. ತಾಳ್ಮೆಯಿರಲಿ.ವೃಷಭ: ವೃತ್ತಿರಂಗದಲ್ಲಿ ಒಳ್ಳೆಯ ದಿನಗಳಿಗಾಗಿ ತಾಳ್ಮೆಯಿಂದ ಕಾಯುವುದು ಉತ್ತಮ. ವ್ಯಾವಹಾರಿಕವಾಗಿ ನಿಮ್ಮನ್ನು ವಂಚಿಸುವವರಿರುತ್ತಾರೆ. ಎಚ್ಚರಿಕೆಯಿಂದಿರಿ. ಸಂಗಾತಿಯ ಬೇಡಿಕೆ ಪೂರೈಸಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.ಮಿಥುನ:ಸಾಂಸಾರಿಕವಾಗಿ ಅಭಿವೃದ್ಧಿ ಕಂಡುಬರಲಿದೆ. ಶುಭ ಮಂಗಲ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿದೆ.