ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಅತಿಯಾಗಿ ಕೆಲಸ ಮಾಡುವ ಉತ್ಸಾಹ ಕಂಡುಬರಲಿದೆ. ಆರ್ಥಿಕವಾಗಿ ಬೇಡದ ಖರ್ಚು ವೆಚ್ಚಗಳನ್ನು ಹತೋಟಿಗೆ ತರಲು ಯತ್ನಿಸುವಿರಿ. ಮಕ್ಕಳ ಭವಿಷ್ಯದ ಬಗ್ಗೆ ಸಂಗಾತಿಯೊಂದಿಗೆ ಚರ್ಚಿಸಲಿದ್ದೀರಿ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.ವೃಷಭ: ವೃತ್ತಿರಂಗದಲ್ಲಿ ಹೆಚ್ಚಿನ ಹೊಣೆಗಾರಿಕೆ ನಿಮ್ಮ ಹೆಗಲಿಗೇರಲಿದೆ. ವೈಯಕ್ತಿಕ ವಿಚಾರಗಳನ್ನು ತಿಳಿಯಲು ನೆರೆಹೊರೆಯವರು ಕಾದಿರುತ್ತಾರೆ. ತಾಳ್ಮೆ, ಸಂಯವಿರಲಿ. ಕಾರ್ಯನಿಮಿತ್ತ ಕಿರು ಓಡಾಟ ನಡೆಸಲಿದ್ದೀರಿ.ಮಿಥುನ: ಯೋಗ್ಯ ವಯಸ್ಕರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ.