ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಅನವಶ್ಯಕವಾಗಿ ಹಣ ಪೋಲು ಮಾಡಬೇಡಿ. ಸರಿಯಾದ ಯೋಜನೆಯೊಂದಿಗೆ ಹೆಜ್ಜೆಯಿಡಿ. ಸಂಗಾತಿಯ ಮೇಲೆ ಅಸಮಾಧಾನ ತೋರಿಬರಲಿದೆ. ತಾಳ್ಮೆ, ಸಂಯಮ ಅಗತ್ಯ. ಹಿರಿಯರಿಗೆ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.ವೃಷಭ: ವೃತ್ತಿರಂಗದಲ್ಲಿ ಎಲ್ಲವೂ ನೀವಂದುಕೊಂಡಂತೆ ನಡೆಯುತ್ತಿಲ್ಲ ಎಂಬ ಚಿಂತೆ ಕಾಡಲಿದೆ. ಆದರೆ ಸಹೋದ್ಯೋಗಿಗಳು ನಿಮ್ಮ ಕಷ್ಟಕ್ಕೆ ಸ್ಪಂದಿಸಲಿದ್ದಾರೆ. ಕೃಷಿಕರಿಗೆ ಲಾಭವಿಲ್ಲದಿದ್ದರೂ ನಷ್ಟವಾಗದು. ಹೊಸ ಯೋಜನೆಗಳಿಗೆ ಕೈ ಹಾಕಲಿದ್ದೀರಿ.ಮಿಥುನ: ಜೀವನದಲ್ಲಿ ಕಷ್ಟ-ಸುಖ ಎರಡನ್ನೂ ಸಮನಾಗಿ ಸ್ವೀಕರಿಸಲು ಸಿದ್ಧರಾಗಿ.