ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಶುಭ ಕಾರ್ಯಗಳಿಗೆ ವಿಘ್ನ ಭಯ ತೋರಿಬರಲಿದೆ. ಮನೆಯಲ್ಲಿ ಹಿರಿಯರ ಆರೋಗ್ಯ ಚಿಂತೆಗೆ ಕಾರಣವಾದೀತು. ಸಾಂಸಾರಿಕವಾಗಿ ಅನಗತ್ಯ ವಿಚಾರಗಳು ನೆಮ್ಮದಿ ಹಾಳುಮಾಡೀತು. ಮಾತಿನ ಮೇಲೆ ಸಂಯಮವಿರಲಿ.ವೃಷಭ: ಅಗತ್ಯಕ್ಕೆ ತಕ್ಕಂತೆ ಅವಕಾಶಗಳು ಸಿಗದೇ ನಿರುದ್ಯೋಗಿಗಳಿಗೆ ನಿರಾಸೆಯಾದೀತು. ಸ್ವಯಂ ವ್ಯಾಪಾರಿಗಳಿಗೆ ವ್ಯವಹಾರಕ್ಕೆ ಅಡೆತಡೆಯಾಗಲಿದೆ. ಭವಿಷ್ಯದ ಬಗ್ಗೆ ಚಿಂತೆಯಾದೀತು. ದೂರ ಸಂಚಾರವನ್ನು ರದ್ದುಗೊಳಿಸಲಿದ್ದೀರಿ.ಮಿಥುನ: ವೃತ್ತಿರಂಗದಲ್ಲಿ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಪಾಲಿಗೆ ಬಂದ ಅವಕಾಶಗಳನ್ನು