ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ವೃತ್ತಿರಂಗದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಅವಕಾಶ ಸಿಕ್ಕಾಗ ಸದುಪಯೋಗಪಡಿಸಿಕೊಳ್ಳಿ. ಹೊಂದಾಣಿಕೆಯ ಸ್ವಭಾವವಿದ್ದರೆ ಸಾಂಸಾರಿಕವಾಗಿ ಸಾಮರಸ್ಯಕ್ಕೆ ಕೊರತೆಯಿರದು. ಅನಗತ್ಯ ವಿಚಾರಕ್ಕೆ ಚಿಂತೆ ಬೇಡ.ವೃಷಭ: ಕೆಳ ಹಂತದ ನೌಕರರಿಗೆ ಭವಿಷ್ಯದ ಬಗ್ಗೆ ಚಿಂತೆಯಾಗಲಿದೆ. ಆರ್ಥಿಕವಾಗಿ ಧನಗಳಿಕೆಗೆ ನಾನಾ ಮಾರ್ಗಗಳನ್ನು ಹುಡುಕಲಿದ್ದೀರಿ. ಕೆಟ್ಟ ಸ್ನೇಹಿತರ ಸಂಗದಿಂದ ದೂರವಿರುವುದು ಉತ್ತಮ. ಮಹಿಳೆಯರಿಗೆ ಬಿಡುವಿಲ್ಲದ ದುಡಿಮೆ.ಮಿಥುನ: ಸಾಂಸಾರಿಕವಾಗಿ ಬಂಧುಮಿತ್ರರ ಸಮಾಗಮದಿಂದ ಮನೆಯಲ್ಲಿ ಸಂತೋಷದ ವಾತಾವರಣವಿರಲಿದೆ. ಮಕ್ಕಳ