ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಏನೇ ಮಾಡಿದರೂ ನಿತ್ಯದ ಚಿಂತೆ ತಪ್ಪದು. ದೈನಂದಿನ ಕೆಲಸಗಳಿಂದ ದೇಹ ಹೈರಾಣಾಗಲಿದೆ. ಕೌಟುಂಬಿಕವಾಗಿ ತಾಳ್ಮೆಯಿಂದ ಮಾತು, ನಡೆ ಇದ್ದರೆ ಸಮಸ್ಯೆಯಾಗದು. ಆರ್ಥಿಕವಾಗಿ ಖರ್ಚು ವೆಚ್ಚಗಳು ಚಿಂತೆಗೆ ಕಾರಣವಾಗಲಿದೆ.ವೃಷಭ: ಪ್ರತಿ ಹಂತದಲ್ಲೂ ವಿವೇಚನೆಯಿಂದ ಕೆಲಸ ಮಾಡಬೇಕಾದ ಅಗತ್ಯವಿದೆ. ಕೆಲಸ ಕಾರ್ಯಗಳಲ್ಲಿ ವಿಳಂಬಗತಿ ತೋರಿಬರಲಿದೆ. ಹಣಕಾಸಿನ ಹರಿವು ಕಡಿಮೆಯಾಗಲಿದೆ. ಭವಿಷ್ಯದ ಬಗ್ಗೆ ಎಚ್ಚರಿಕೆಯ ಹೆಜ್ಜೆಯಿಡಬೇಕು.ಮಿಥುನ: ಮೇಲ್ವರ್ಗದ ಅಧಿಕಾರಿಗಳಿಗೆ ವೃತ್ತಿರಂಗದಲ್ಲಿ ಮುನ್ನಡೆಯ ಯೋಗವಿದೆ.