ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನಿರ್ಧಾರ ಕೈಗೊಳ್ಳುವಾಗ ಗೊಂದಲ ಕಾಡುವುದು ಸಹಜ. ಆಪ್ತರೊಂದಿಗೆ ಸಮಾಲೋಚನೆ ನಡೆಸಿ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಶುಭವಾಗಲಿದೆ. ಹಿರಿಯರ ಆರೋಗ್ಯ ಚಿಂತೆಗೆ ಕಾರಣವಾದೀತು.ವೃಷಭ: ಕೌಟುಂಬಿಕವಾಗಿ ನಿಮ್ಮ ತಾಳ್ಮೆ ಪರೀಕ್ಷೆ ನಡೆಯಲಿದೆ. ನಿಮ್ಮ ಮಾತುಗಳಿಗೆ ಆಪ್ತರಿಂದ ಬೆಲೆ ಸಿಗುತ್ತಿಲ್ಲ ಎಂಬ ಬೇಸರ ಕಾಡೀತು. ವೃತ್ತಿರಂಗದಲ್ಲಿ ಶಕ್ತಿಮೀರಿ ಪ್ರಯತ್ನ ಮಾಡಲಿದ್ದೀರಿ. ಅನಗತ್ಯ ಖರ್ಚುಗಳಿಗೆ ಕಡಿವಾಣವಿರಲಿ.ಮಿಥುನ: ನಿಮ್ಮ ಜೊತೆಗೇ ಇದ್ದು ಲಾಭ