ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಬಂಧು ಮಿತ್ರರ ಚಾಡಿ ಮಾತುಗಳಿಂದ ತೊಂದರೆಯಾದೀತು. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಿ. ಯಾರ ಜೊತೆಗೂ ಸಂಘರ್ಷಕ್ಕಿಳಿಯುವುದು ಬೇಡ. ತಾಳ್ಮೆ,ಸಂಯಮವೇ ಮುಖ್ಯವಾಗಲಿದೆ.ವೃಷಭ: ವಿದ್ಯಾರ್ಥಿಗಳು ಉತ್ತಮ ಸ್ನೇಹ ಸಂಗ ಮಾಡುವುದು ಮುಖ್ಯವಾಗಲಿದೆ. ಅಭ್ಯಾಸದ ಕಡೆಗೆ ಗಮನ ಕಡಿಮೆ ಆಗದಿರಲಿ. ಸ್ವಯಂ ಉದ್ಯೋಗಿಗಳಿಗೆ ಭವಿಷ್ಯದ ದಾರಿ ಬಗ್ಗೆ ಚಿಂತೆಯಾದೀತು. ಖರ್ಚು ವೆಚ್ಚದ ಬಗ್ಗೆ ನಿಯಂತ್ರಣವಿರಲಿ.ಮಿಥುನ: ಸಾಂಸಾರಿಕವಾಗಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಸರಿಪಡಿಸಿಕೊಂಡು ಹೋಗಬೇಕಾಗುತ್ತದೆ.