ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಸಾಂಸಾರಿಕವಾಗಿ ಸಮಸ್ಯೆಗಳು ಪರಿಹಾರವಾಯಿತೆಂದುಕೊಳ್ಳುವಷ್ಟರಲ್ಲೇ ಹೊಸ ಸಮಸ್ಯೆಗಳು ಉದ್ಭವವಾಗಲಿದೆ. ಸಂಗಾತಿಯೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಆರ್ಥಿಕವಾಗಿ ಭವಿಷ್ಯದ ದೃಷ್ಟಿಯಿಂದ ಹೊಸ ಯೋಜನೆ ಹಾಕಿಕೊಳ್ಳುವಿರಿ.ವೃಷಭ: ವೃತ್ತಿರಂಗದಲ್ಲಿ ನಿಮ್ಮ ಶತ್ರುಗಳಿಗೆ ಸೋಲಾಗಲಿದೆ. ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗಲಿದ್ದೀರಿ. ಆದರೆ ಆರ್ಥಿಕ ಪರಿಸ್ಥಿತಿ ಚಿಂತೆಗೆ ಕಾರಣವಾಗಲಿದೆ. ಸಂಗಾತಿಯ ಸಮಾಧಾನಕರ ಮಾತುಗಳು ನೆಮ್ಮದಿ ನೀಡಲಿದೆ.ಮಿಥುನ: ನಿಮ್ಮನ್ನು ಅತಿಯಾಗಿ ಹೊಗಳುವವರ ಬಗ್ಗೆ ಎಚ್ಚರಿಕೆಯಿಂದಿರಿ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಬಗ್ಗೆ ಇತರರಿಗೆ ಸದಭಿಪ್ರಾಯ