ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನಿಮ್ಮದಲ್ಲದ ವಿಚಾರದಲ್ಲಿ ಅನಗತ್ಯ ತಲೆಕಡಿಸಿಕೊಳ್ಳಬೇಕಾಗಿಲ್ಲ. ಅನಗತ್ಯವಾಗಿ ದೇಹಾರೋಗ್ಯದ ಬಗ್ಗೆ ಚಿಂತೆ ಬೇಡ. ಸಾಂಸಾರಿಕವಾಗಿ ತಾಳ್ಮೆ, ಹೊಂದಾಣಿಕೆ ಅಗತ್ಯ. ಗೃಹೋಪಯೋಗಿ ವಸ್ತುಗಳಿಗಾಗಿ ಖರ್ಚು ವೆಚ್ಚ ಮಾಡಲಿದ್ದೀರಿ.ವೃಷಭ: ಸಾಂಸಾರಿಕವಾಗಿ ನೀವು ಕೈಗೊಳ್ಳುವ ಕೆಲವು ನಿರ್ಧಾರಗಳಿಂದ ಸಂಗಾತಿಯ ಕೋಪಕ್ಕೆ ಗುರಿಯಾಗಲಿದ್ದೀರಿ. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ವ್ಯವಹಾರಗಳಲ್ಲಿ ಮುನ್ನಡೆ ಕಂಡುಬರಲಿದೆ. ತಾಳ್ಮೆಯಿರಲಿ.ಮಿಥುನ: ಇಂದು ನೀವು ಕೈಗೊಳ್ಳುವ ನಿರ್ಧಾರಗಳು ನಿಮ್ಮ ಭವಿಷ್ಯಕ್ಕೆ ಪೂರಕವಾಗಲಿದೆ. ವಿದ್ಯಾರ್ಥಿಗಳಿಗೆ