ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ನಿಧಾನಿಸಿ ನೋಡಿದಾಗ ನೀವು ಮಾಡಿದ ತಪ್ಪು ನಿಮಗೇ ತಿಳಿಯುವುದು. ಸಾಂಸಾರಿಕವಾಗಿ ಮಾತಿನ ಮೇಲೆ ನಿಗಾ ಇಲ್ಲದಿದ್ದರೆ ಭಿನ್ನಾಭಿಪ್ರಾಯಗಳು ತಪ್ಪದು. ಆರ್ಥಿಕವಾಗಿ ಕೊಂಚ ಚೇತರಿಕೆ ವಾತಾವರಣವಿರುವುದು. ತಾಳ್ಮೆಯಿರಲಿ.ವೃಷಭ: ಮಂಗಳ ವಸ್ತ್ರಾದಿಗಳ ಖರೀದಿಗೆ ಖರ್ಚು ವೆಚ್ಚಗಳಾಗಲಿವೆ. ಹಿರಿಯರಿಗೆ ದೇಹಾರೋಗ್ಯದಲ್ಲಿ ಕೊಂಚ ಏರುಪೇರಾದೀತು, ಆತಂಕ ಬೇಡ. ನಿರುದ್ಯೋಗಿಗಳು ಉದ್ಯೋಗ ಸಂದರ್ಶನಕ್ಕೆ ಪರವೂರಿಗೆ ಸಂಚರಿಸಲಿದ್ದಾರೆ.ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ನಿಮಗೆ ಇದುವರೆಗೆ ಇದ್ದ ಅಡೆತಡೆಗಳು