ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನಿಮಗೆ ಅರಿವಿಲ್ಲದೇ ಆಗುವ ತಪ್ಪುಗಳಿಂದ ತೊಂದರೆ ಎದುರಿಸಬೇಕಾಗಬಹುದು. ಆತ್ಮೀಯರೊಂದಿಗೆ ಅನಗತ್ಯ ಸಂಘರ್ಷ ಬೇಡ. ಹಿರಿಯರ ಸಲಹೆಗಳು ಪಥ್ಯವಾಗದೇ ಹೋದೀತು. ದೇಹಾರೋಗ್ಯದಲ್ಲಿ ಸುಧಾರಣೆಯಾಗಲಿದೆ.ವೃಷಭ: ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ನಿಮ್ಮ ಕೆಲಸಗಳಿಗೆ ಪ್ರಶಂಸೆ ಸಿಗಲಿದೆ. ನಿಮ್ಮ ಏಳಿಗೆ ಇತರರ ಅಸೂಯೆಗೆ ಕಾರಣವಾಗಬಹುದು. ತಾಳ್ಮೆ, ಸಂಯಮದಿಂದ ನಡೆದುಕೊಳ್ಳಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.ಮಿಥುನ: ವಾಹನ ಸವಾರರಿಗೆ ಅಪಘಾತದ ಭಯವಿದ್ದು, ಚಾಲನೆಯಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ.