ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಇಚ್ಛಿತ ಕಾರ್ಯಗಳು ಅಂದುಕೊಂಡ ರೀತಿಯಲ್ಲೇ ಸುಗಮವಾಗಿ ನೆರವೇರಲಿದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಶತ್ರುಗಳಿಗೆ ಹಿನ್ನಡೆಯಾಗಲಿದೆ. ಆರ್ಥಿಕವಾಗಿ ಹೊಸ ಯೋಜನೆಗಳಿಗೆ ಕೈ ಹಾಕಲಿದ್ದೀರಿ. ಲೆಕ್ಕಪತ್ರಗಳ ಬಗ್ಗೆ ಎಚ್ಚರಿಕೆಯಿಂದಿರಿ.ವೃಷಭ: ಸರಕಾರಿ ಉದ್ಯೋಗಿಗಳಿಗೆ ಬಡ್ತಿ ಯೋಗ ಸದ್ಯದಲ್ಲೇ ಕೂಡಿಬರುವುದು. ಮೇಲಧಿಕಾರಿಗಳು ನಿಮ್ಮ ಕ್ರಿಯಾತ್ಮಕ ಕೆಲಸಗಳನ್ನು ಪ್ರಶಂಸಿಸಲಿದ್ದಾರೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ತಾಳ್ಮೆಯಿರಲಿ.ಮಿಥುನ: ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ನೇರವಾಗಿ ಹೇಳುವುದರಿಂದ ಬೇರೆಯವರ ಮನಸ್ಸಿಗೆ