ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಮಂಗಳವಾರ, 20 ಜುಲೈ 2021 (08:36 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಯಾರದ್ದೋ ತಪ್ಪಿಗೆ ನೀವು ದಂಡ ತೆರುವ ಅನಿವಾರ್ಯತೆ ಎದುರಾದೀತು. ಎಚ್ಚರಿಕೆಯಿಂದ ವ್ಯವಹರಿಸಿದರೆ ಉತ್ತಮ. ಸರ್ಕಾರಿ ಕೆಲಸಗಳಿಗಾಗಿ ಓಡಾಟ ನಡಸಲಿದ್ದೀರಿ. ವ್ಯಾಪಾರಿಗಳಿಗೆ ಚೇತರಿಕೆಯ ವಾತಾವರಣ ಕಂಡುಬರಲಿದೆ.
 
ವೃಷಭ: ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ ಭವಿಷ್ಯದ ದೃಷ್ಟಿಯಿಂದ ಯೋಜನೆ ಹಾಕಿಕೊಳ್ಳಲಿದ್ದೀರಿ. ನಿಮ್ಮ ಕೆಲಸಗಳಿಗೆ ಸಂಗಾತಿಯ ಸಹಕಾರ ಸಿಗಲಿದೆ. ಮಕ್ಕಳಿಂದ ಸಂತೋಷದ ವಾರ್ತೆ ಕೇಳಿಬಂದೀತು. ತಾಳ್ಮೆಯಿರಲಿ.
 
ಮಿಥುನ: ದುಡುಕಿನಿಂದ ನಿರ್ಧಾರ ಕೈಗೊಂಡು ತೊಂದರೆಗೆ ಸಿಲುಕಿಕೊಳ್ಳುವ ಪ್ರಸಂಗ ಎದುರಾದೀತು. ಕೈಲಾಗದ ಕೆಲಸ ಮಾಡಲು ಹೋಗಿ ತೊಂದರೆಗೆ ಸಿಲುಕಿಕೊಳ್ಳಬೇಡಿ. ಸ್ವಯಂ ವೃತ್ತಿಯವರಿಗೆ ಲಾಭದಾಯಕ ದಿನಗಳಿವು.
 
ಕರ್ಕಟಕ: ನಿಮ್ಮ ವಿಚಾರಧಾರೆಗಳು ಇತರರಿಗೆ ಇಷ್ಟವಾಗದೇ ಹೋದೀತು. ಯಾರ ಮೇಲೆ ಅತಿಯಾದ ನಿರೀಕ್ಷೆಯಿಟ್ಟುಕೊಂಡಿದ್ದೀರೋ ಅವರಿಂದ ನಿರಾಸೆಯಾದೀತು. ಆಕಸ್ಮಿಕವಾಗಿ ಧನಲಾಭವಾಗಲಿದೆ.
 
ಸಿಂಹ: ವ್ಯಾಪಾರ, ವ್ಯವಹಾರ ಕ್ಷೇತ್ರದಲ್ಲಿರುವವರಿಗೆ ಮುನ್ನಡೆಯ ಯೋಗ ಕೂಡಿಬರಲಿದೆ. ಆರ್ಥಿಕವಾಗಿ ಹಂತ ಹಂತವಾಗಿ ಅಭಿವೃದ್ಧಿ ಕಂಡುಬರಲಿದೆ. ಯೋಗ್ಯ ವಯಸ್ಕರು ಸೂಕ್ತ ವೈವಾಹಿಕ ಸಂಬಂಧಕ್ಕಾಗಿ ಕೆಲವು ದಿನ ಕಾಯುವುದು ಒಳಿತು.
 
ಕನ್ಯಾ: ಮಹಿಳೆಯರ ವಿಚಾರದಲ್ಲಿ ಎಚ್ಚರಿಕೆಯಿಂದ ವರ್ತಿಸಿ. ವಿನಾಕಾರಣ ಅಪವಾದಕ್ಕೆ ಗುರಿಯಾಗುವ ಅಪಾಯವಿದೆ. ನೆರೆಹೊರೆಯವರು ನಿಮ್ಮ ಗುಟ್ಟು ತಿಳಿಯಲು ಪ್ರಯತ್ನಿಸುತ್ತಾರೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ.
 
ತುಲಾ: ನಿಮ್ಮ ಸ್ವಾಭಾವಿಕ ನಡೆನುಡಿಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುವ ಅನಿವಾರ್ಯ ಪರಿಸ್ಥಿತಿ ಎದುರಾಗಲಿದೆ. ನೂತನ ದಂಪತಿಗಳು ಸುಂದರ ಕ್ಷಣ ಕಳೆಯಲಿದ್ದಾರೆ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ.
 
ವೃಶ್ಚಿಕ: ಬೇರೆಯವರ ಕಷ್ಟಕ್ಕೆ ಸ್ಪಂದಿಸಲು ಹೋಗಿ ತೊಂದರೆಗೆ ಸಿಲುಕಿಕೊಳ್ಳಬೇಡಿ. ಅನ್ಯರ ಜೀವನದಲ್ಲಿ ಅನಗತ್ಯವಾಗಿ ಮೂಗು ತೂರಿಸದೇ ಇದ್ದರೆ ಉತ್ತಮ. ಧನಾದಾಯ ಹೆಚ್ಚಿಸಲು ಅನ್ಯ ಮಾರ್ಗಗಳತ್ತ ಚಿಂತನೆ ನಡೆಸಲಿದ್ದೀರಿ.
 
ಧನು: ಎಷ್ಟೋ ದಿನದಿಂದ ಬಾಕಿಯಿದ್ದ ಕೆಲಸಗಳಿಗೆ ಚಾಲನೆ ನೀಡಲಿದ್ಧೀರಿ. ಧಾರ್ಮಿಕ ಕ್ಷೇತ್ರಗಳ ಸಂದರ್ಶನದಿಂದ ಮನಸ್ಸಿಗೆ ನೆಮ್ಮದಿಯಾಗಲಿದೆ. ಕೋರ್ಟು ಕಚೇರಿ ವ್ಯವಹಾರಗಳಿಗೆ ಓಡಾಟ ನಡೆಸಬೇಕಾಗಬಹುದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಮಕರ: ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಮಾನಸಿಕವಾಗಿ ನಿಮ್ಮನ್ನು ಕಾಡುತ್ತಿದ್ದ ಸಮಸ್ಯೆಗಳಿಗೆ ಆಪ್ತರಿಂದ ಸಲಹೆ ಪಡೆಯಲಿದ್ದೀರಿ. ಕಟ್ಟಡ ಕಾಮಗಾರಿ ಕೆಲಸಗಳನ್ನು ಪ್ರಾರಂಭಿಸಲು ಇದು ಸಕಾಲ.
 
ಕುಂಭ: ಹಿರಿಯರಿಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಂಡುಬಂದೀತು. ಆದರೆ ವಿನಾಕಾರಣ ಚಿಂತೆ ಬೇಡ. ಅನಿರೀಕ್ಷಿತವಾಗಿ ಸಿಗುವ ವ್ಯಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ದೇವತಾ ಪ್ರಾರ್ಥನೆ ಮಾಡಿ.
 
ಮೀನ: ನಿಮ್ಮ ಮನಸ್ಸಿನಲ್ಲಿರುವ ವಿಚಾರಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಬಹುದಿನಗಳ ಕನಸು ನನಸು ಮಾಡಲಿದ್ದೀರಿ. ಅನಿರೀಕ್ಷಿತ ಖರ್ಚು ವೆಚ್ಚಗಳಾದೀತು.
ಇದರಲ್ಲಿ ಇನ್ನಷ್ಟು ಓದಿ :