ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಗುರುವಾರ, 29 ಜುಲೈ 2021 (08:38 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 

ಮೇಷ: ನಿಮ್ಮ ಹಿತಶತ್ರುಗಳಿಂದ ತೊಂದರೆಗಳು ಎದುರಾದರೂ ಅಂತಿಮ ಜಯ ನಿಮ್ಮದಾಗುವುದು. ಕಾರ್ಯಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರುವ ಕನಸು ಸದ್ಯದಲ್ಲೇ ನನಸಾಗಲಿದೆ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ.
 
ವೃಷಭ: ಇಷ್ಟ ಮಿತ್ರರೊಂದಿಗೆ ಪ್ರವಾಸ, ಭೋಜನ ಮಾಡುವ ಯೋಗ ಕೂಡಿಬರಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿದೆ. ವಿಶೇಷವಾದ ವ್ಯಕ್ತಿಯನ್ನು ಭೇಟಿಯಾಗುವ ಯೋಗವಿದೆ.
 
ಮಿಥುನ: ನಿಮ್ಮ ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಇದು ಸಕಾಲ. ಕಳೆದು ಹೋದ ವಸ್ತುಗಳನ್ನು ಮರಳಿ ಪಡೆಯಲಿದ್ದೀರಿ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳಾಗಲಿವೆ.
 
ಕರ್ಕಟಕ: ವೃತ್ತಿರಂಗದಲ್ಲಿ ನಿಮ್ಮ ಹತ್ತಿರದವರೇ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಲಿದ್ದಾರೆ. ಲೆಕ್ಕಪತ್ರಗಳ ಬಗ್ಗೆ ಎಚ್ಚರಿಕೆಯಿರಲಿ. ಮನೆಗೆ ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನದ ಸಾಧ್ಯತೆಯಿದೆ. ಅನಿರೀಕ್ಷಿತ ಖರ್ಚು ವೆಚ್ಚಗಳಿಗೆ ಸಿದ್ಧರಾಗಿ.
 
ಸಿಂಹ: ಅನಗತ್ಯ ವಿಚಾರಗಳಿಂದ ಮಾನಸಿಕವಾಗಿ ಗೊಂದಲ ಹೆಚ್ಚೀತೇ ಹೊರತು ಪರಿಹಾರ ಸಿಗದು ಎಂಬುದನ್ನು ಮನಗಾಣಲಿದ್ದೀರಿ. ರಾಜಕೀಯ ರಂಗದಲ್ಲಿರುವವರಿಗೆ ಸ್ಥಾನ ಮಾನ ವೃದ್ಧಿಯಾಗಲಿದೆ. ತಾಳ್ಮೆಯಿರಲಿ.
 
ಕನ್ಯಾ: ಸಾಮಾಜಿಕವಾಗಿ ನಿಮ್ಮ ಪ್ರತಿಷ್ಠೆ, ಗೌರವ ಹೆಚ್ಚಾಗುವುದು. ಕಲಾಕ್ಷೇತ್ರದಲ್ಲಿರುವವರಿಗೆ ಕೀರ್ತಿ ಸಂಪಾದಿಸುವ ಯೋಗವಿದೆ. ವೈದ್ಯಕೀಯ ವೃತ್ತಿಯವರಿಗೆ ಬಿಡುವಿಲ್ಲದ ಕೆಲಸವಿರಲಿದೆ. ಕುಲದೇವರ ಪ್ರಾರ್ಥನೆ ಮಾಡಿ.
 
ತುಲಾ: ನಿಮ್ಮ ವಯಸ್ಸಿಗೆ ಮೀರಿ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ ಎದುರಾದೀತು. ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸಲಿದ್ದೀರಿ.
 
ವೃಶ್ಚಿಕ: ಸಹೋದರರೊಂದಿಗೆ ಕೌಟುಂಬಿಕ ವಿಚಾರಕ್ಕೆ ಭಿನ್ನಾಭಿಪ್ರಾಯಗಳು ಮೂಡೀತು. ಸಂಗಾತಿಯ ಸಲಹೆಗಳನ್ನು ಪಾಲಿಸುವುದು ಉತ್ತಮ. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗವಿದೆ.
 
ಧನು: ನೀವು ಹಿಂದೆ ಮಾಡಿದ ತಪ್ಪುಗಳಿಗೆ ಇಂದು ಪಶ್ಚಾತ್ತಾಪ ಪಡುವ ಪರಿಸ್ಥಿತಿ ಎದುರಾದೀತು. ಆರ್ಥಿಕವಾಗಿ ಹಣಕಾಸಿನ ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ದಿನದಂತ್ಯಕ್ಕೆ ನೆಮ್ಮದಿ.
 
ಮಕರ: ಅನಗತ್ಯ ವಿಚಾರಗಳಿಗೆ ನೀವು ಗೊಂದಲ ಮಾಡಿಕೊಂಡು, ಜೊತೆಗಿದ್ದವರನ್ನೂ ಚಿಂತೆಗೆ ದೂಡಲಿದ್ದೀರಿ. ಕೃಷಿಕರಿಗೆ ವ್ಯವಹಾರಕ್ಕೆ ಅಡೆತಡೆಗಳು ಕಂಡುಬಂದೀತು. ಯಂತ್ರೋಪಕರಣಗಳ ವೃತ್ತಿಯಲ್ಲಿರುವವಿರಗೆ ಮುನ್ನಡೆಯಿರಲಿದೆ.
 
ಕುಂಭ: ವ್ಯಾವಹಾರಿಕ ಸಂಬಂಧ ವೃದ್ಧಿಗೆ ಮುಂದಾಗಲಿದ್ದೀರಿ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಅಂದುಕೊಂಡಿದ್ದ ಕೆಲಸ ಪೂರ್ತಿ ಮಾಡಲಿದ್ದೀರಿ. ಪ್ರೀತಿ ಪಾತ್ರರನ್ನು ಭೇಟಿಯಾಗುವ ಯೋಗ ಕೂಡಿಬರಲಿದೆ.
 
ಮೀನ: ಉದ್ಯೋಗ ಕ್ಷೇತ್ರದಲ್ಲಿ ಅವಕಾಶಗಳು ಬಂದಾಗ ಅದನ್ನು ಸರಿಯಾಗಿ ಬಳಸಿಕೊಳ್ಳಿ. ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿದೆ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ.
ಇದರಲ್ಲಿ ಇನ್ನಷ್ಟು ಓದಿ :