ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನಿಮ್ಮ ಆಂತರಿಕ ವಿಚಾರಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಮೊದಲು ಯೋಚನೆ ಮಾಡಿ. ಉದ್ಯೋಗ ರಂಗದಲ್ಲಿ ಹಿತಶತ್ರುಗಳ ಕಾಟದಿಂದ ಮುಕ್ತಿ ಸಿಗಲಿದೆ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಲಿದ್ದೀರಿ.ವೃಷಭ: ಸರಕಾರಿ ಕೆಲಸಗಳನ್ನು ಪೂರ್ತಿ ಮಾಡಲು ಅಲೆದಾಡುವ ಪರಿಸ್ಥಿತಿ ಎದುರಾದೀತು. ವೈಯಕ್ತಿಕ ಕಷ್ಟಗಳಿಗೆ ಮಿತ್ರರು ಹೆಗಲು ಕೊಡಲಿದ್ದಾರೆ. ವ್ಯಾಪಾರೀ ವರ್ಗದವರಿಗೆ ಉನ್ನತಿಯ ಯೋಗವಿದೆ. ತಾಳ್ಮೆ, ಸಂಯಮ ಅಗತ್ಯ.ಮಿಥುನ: ಸ್ವಯಂ ವೃತ್ತಿಯವರಿಗೆ ಅಡೆತಡೆಗಳು ಬಂದರೂ ಕ್ರಿಯಾತ್ಮಕವಾಗಿ