ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಕೂಡಿಟ್ಟ ಸಂಪತ್ತು ಕಳೆದುಕೊಳ್ಳುವ ಭೀತಿ ಎದುರಾದೀತು. ದೇವತಾ ಕಾರ್ಯಗಳನ್ನು ನೆರವೇರಿಸಲು ಮುಂದಾಗಲಿದ್ದೀರಿ. ಕೌಟುಂಬಿಕವಾಗಿ ಸಾಮರಸ್ಯ ಅಗತ್ಯ. ಮಕ್ಕಳ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.ವೃಷಭ: ಗೃಹೋಪಯೋಗಿ ವಸ್ತುಗಳ ಖರೀದಿ, ಸಣ್ಣ ಪುಟ್ಟ ರಿಪೇರಿ ಕೆಲಸಗಳಿಗಾಗಿ ಖರ್ಚು ವೆಚ್ಚಗಳಾದೀತು. ಧನ ಗಳಿಕೆಗೆ ಅನ್ಯ ಮಾರ್ಗಗಳತ್ತ ಚಿಂತನೆ ನಡೆಸಲಿದ್ದೀರಿ. ಯೋಗ್ಯ ವಯಸ್ಕರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ.ಮಿಥುನ: ವ್ಯಾಪಾರಿಗಳಿಗೆ ಧನಾದಾಯ ಹೆಚ್ಚಲಿದ್ದರೂ ಶತ್ರುಭಯ ಕಾಡಿ