ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಹಿರಿಯರಿಂದ ಸುಖ-ಸಂತೋಷ ನೆಮ್ಮದಿ ಸಿಗುವುದು. ಪರ ಸ್ಥಳಗಳಿಗೆ ಭೇಟಿಯಾಗುವ ಸಂದರ್ಭ ಎದುರಾದೀತು. ಕಾರ್ಯದೊತ್ತಡದಿಂದ ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ. ಕುಲದೇವರ ಪ್ರಾರ್ಥನೆ ಮಾಡಿದರೆ ಒಳಿತು.ವೃಷಭ: ಸಹೋದರರ ಸಹಕಾರದಿಂದ ಭೂ ಸಂಬಂಧೀ ವ್ಯಾಜ್ಯಗಳು ಬಗೆಹರಿಯಲಿವೆ. ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ದಿನದಂತ್ಯಕ್ಕೆ ನೆಮ್ಮದಿಯಿರುವುದು.ಮಿಥುನ: ಸಾಲಗಾರರ ಬಳಿ ಬಾಕಿಯಾಗಿದ್ದ ಹಣಕಾಸಿನ ವ್ಯವಹಾರ ಪೂರ್ತಿಯಾಗಲಿದೆ. ಹೊಸ ವ್ಯವಹಾರಗಳಿಗೆ