ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಶ್ರದ್ಧಾ ಭಕ್ತಿಯಿಂದ ದೇವತಾ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಉತ್ತಮ ಫಲ ಪಡೆಯಬಹುದು. ಮಕ್ಕಳು ನಿಮ್ಮ ಮಾತು ಕೇಳುತ್ತಿಲ್ಲವೆಂಬ ಚಿಂತೆ ಕಾಡೀತು. ಆಪ್ತರೊಂದಿಗೆ ಮನಸ್ಸಿನ ದುಃಖ ಹಂಚಿಕೊಳ್ಳಲಿದ್ದೀರಿ.ವೃಷಭ: ಇಂದು ದೈವಾನುಗ್ರಹದಿಂದ ನೀವು ಪ್ರಾರಂಭಿಸುವ ಕೆಲಸಗಳಲ್ಲಿ ಯಶಸ್ಸು ಕಾಣಲಿದ್ದೀರಿ. ದೂರದ ನೆಂಟರು ಸಹಾಯಕ್ಕೆ ಬರಲಿದ್ದಾರೆ. ಸಾಮಾಜಿಕವಾಗಿ ಎಲ್ಲರಿಂದ ಮನ್ನಣೆ ಗಳಿಸುವ ದಿನ. ತಾಳ್ಮೆ, ಸಂಯಮವಿರಲಿ.ಮಿಥುನ: ವೃತ್ತಿರಂಗದಲ್ಲಿ ಕಾರ್ಯಸಾಧನೆಗೆ ಹೆಚ್ಚಿನ ಪರಿಶ್ರಮ ಪಡಬೇಕಾದೀತು.