ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಕೌಟುಂಬಿಕವಾಗಿ ವಿಚಾರವಾಗಿ ಕೆಲವೊಂದು ಭಿನ್ನಾಭಿಪ್ರಾಯಗಳು ಕಂಡುಬಂದೀತು. ತಾಳ್ಮೆ, ಸಂಯಮದಿಂದ ನಿಭಾಯಿಸಿ. ಹಳೆಯ ಬಾಕಿಗಳನ್ನು ತೀರಿಸಲಿದ್ದೀರಿ. ಕೊಡು-ಕೊಳ್ಳುವಿಕೆ ವ್ಯವಹಾರಗಳಲ್ಲಿ ಲಾಭವಾದೀತು.ವೃಷಭ: ದೂರ ಸಂಚಾರದಿಂದ ಕಾರ್ಯಸಿದ್ಧಿಯಾಗಲಿದೆ. ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿಯಾಗಲಿದೆ. ಆರ್ಥಿಕವಾಗಿ ಅಭಿವೃದ್ಧಿ ಕಂಡುಬರಲಿದೆ. ಇಷ್ಟದೇವತೆಗಳ ಪ್ರಾರ್ಥನೆಯಿಂದ ದಿನದಾರಂಭ ಮಾಡಿದರೆ ಉತ್ತಮ.ಮಿಥುನ: ಬಂಧು ಮಿತ್ರರ ಸಹಕಾರದಿಂದ ಕಾರ್ಯಸಿದ್ಧಿಯಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಅನಿರೀಕ್ಷಿತವಾಗಿ ಸ್ಥಾನ ಪಲ್ಲಟವಾಗುವ ಸಾಧ್ಯತೆಯಿದೆ. ಹಿರಿಯರ ಸಲಹೆ ಸೂಚನೆ