ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಪಾರದರ್ಶಕವಾಗಿ ಮಾಡುವ ವ್ಯವಹಾರಗಳಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಕಾರ್ಯ ನಿಮಿತ್ತ ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ. ಇಷ್ಟದೇವತೆಗಳ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಒಳಿತು.ವೃಷಭ: ಹೊಸದಾಗಿ ಭೇಟಿಯಾಗುವ ವ್ಯಕ್ತಿಗಳಿಂದ ನಿಮ್ಮ ಉದ್ಯೋಗ,ವ್ಯವಹಾರಗಳಿಗೆ ಲಾಭವಾಗಲಿದೆ. ಸರಕಾರಿ ನೌಕರರಿಗೆ ಪಗಾರ ಹೆಚ್ಚಳ ಸಂಭವ. ಕಾರ್ಮಿಕರಿಗೆ ಅನುಕೂಲಕರ ವಾತಾವರಣವಿರಲಿದೆ. ಚಿಂತೆ ಬೇಡ.ಮಿಥುನ: ಧಾರ್ಮಿಕ ಕ್ಷೇತ್ರ ಸಂದರ್ಶನ, ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಇತ್ಯಾದಿಗಳಿಂದ ನೆಮ್ಮದಿ