ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ವೃತ್ತಿರಂಗವಿರಲಿ, ಸಾಂಸಾರಿಕ ಜೀವನವಿರಲಿ, ತಾಳ್ಮೆಯಿಂದ ವ್ಯವಹರಿಸುವುದು ಮುಖ್ಯ. ಉದ್ಯೋಗ ಕ್ಷೇತ್ರದಲ್ಲಿ ಹಲವು ಸ್ಪರ್ಧಿಗಳು ಹುಟ್ಟಿಕೊಳ್ಳಲಿದ್ದಾರೆ. ಆರ್ಥಿಕವಾಗಿ ಸರಿಯಾದ ಯೋಜನೆ ನಿಮಗೆ ಒಳಿತು ಮಾಡಲಿದೆ.ವೃಷಭ: ಉದ್ಯೋಗ ಕ್ಷೇತ್ರದಲ್ಲಿ ವ್ಯವಹಾರ ನಿಷ್ಠೆ ತೋರಲಿದ್ದೀರಿ. ಮೇಲಧಿಕಾರಿಗಳ ಪ್ರೀತಿಗೆ ಪಾತ್ರರಾಗುವಿರಿ. ವ್ಯಾಪಾರಿಗಳಿಗೆ ಉನ್ನತಿಗೆ ಅವಕಾಶಗಳು ಒದಗಿಬರಲಿದೆ. ಸಮಯಾವಕಾಶಗಳನ್ನು ಹಾಳುಮಾಡಬೇಡಿ.ಮಿಥುನ: ನಾಲಿಗೆ ಮೇಲೆ ಕಡಿವಾಣ ಇಲ್ಲದೇ ಹೋದರೆ ಸಂಬಂಧಗಳು ಹಾಳಾದೀತು. ವೃತ್ತಿರಂಗದಲ್ಲಿ ಸಮಯ ಪರಿಪಾಲನೆ