ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಕೆಲಸ ಕಾರ್ಯಗಳಲ್ಲಿ ನಿಮ್ಮದೇ ಮುಂದಾಳತ್ವವಿರಲಿದೆ. ಸರಕಾರಿ ಕೆಲಸದವರಿಗೆ ಕಾರ್ಯದೊತ್ತಡ ಕಂಡುಬಂದೀತು. ಕೊಡು-ಕೊಳ್ಳುವಿಕೆ ವ್ಯವಹಾರದಲ್ಲಿ ನಿಮ್ಮ ಜಾಣತನ ಪ್ರದರ್ಶಿಸಬೇಕು. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ.ವೃಷಭ: ಪ್ರೀತಿ ಪಾತ್ರರನ್ನು ಭೇಟಿಯಾಗಲು ಮನಸ್ಸು ಹಾತೊರೆಯುವುದು. ವೃತ್ತಿರಂಗದಲ್ಲಿ ಮುನ್ನಡೆಗೆ ಅವಕಾಶಗಳು ಸಿಕ್ಕಾಗ ಮೀನ ಮೇಷ ಎಣಿಸುತ್ತಾ ಕೂರಬೇಡಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಬರಲಿದೆ.ಮಿಥುನ: ಭೂ ವ್ಯವಹಾರಗಳು ಸುಗಮವಾಗಿ ನಡೆದು ಹೋಗಲಿವೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ