ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಪದೇ ಪದೇ ಒಂದೇ ವಿಚಾರದ ಬಗ್ಗೆ ಯೋಚಿಸುತ್ತಾ ಮಾನಸಿಕವಾಗಿ ಕುಗ್ಗಿ ಹೋಗಬೇಡಿ. ಆಪ್ತರೊಂದಿಗೆ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಲಿದ್ದೀರಿ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟು ಎದುರಾದೀತು. ತಾಳ್ಮೆಯಿರಲಿ.ವೃಷಭ: ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಮುನ್ನಡೆ ಸಿಗಲಿದೆ. ವೃತ್ತಿರಂಗದಲ್ಲಿ ಪೈಪೋಟಿಗಳು ಎದುರಾದೀತು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಆರಂಭಿಸಲಿದ್ದಾರೆ. ದೇವತಾ ಪ್ರಾರ್ಥನೆ ಮಾಡಿ.ಮಿಥುನ: ಇಂದು ನೀವು ಕೈಗೊಳ್ಳುವ ನಿರ್ಧಾರಗಳು ನಿಮ್ಮ ಭವಿಷ್ಯ ತೀರ್ಮಾನಿಸಲಿದೆ. ಸ್ವಯಂ