ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬಂದರೂ ಮಾನಸಿಕವಾಗಿ ಕೆಲವೊಂದು ವಿಚಾರಗಳನ್ನು ನಿಮ್ಮನ್ನು ಬಾಧಿಸಲಿವೆ. ದೈನಂದಿನ ಕೆಲಸಗಳಲ್ಲಿ ತೊಡಗಿಸಿಕೊಳ್ಳಲೇಬೇಕಾಗುತ್ತದೆ. ತಾಳ್ಮೆ, ಸಂಯಮವಿರಲಿ.ವೃಷಭ: ಎಷ್ಟೇ ಕಷ್ಟದ ವ್ಯವಹಾರವಾದರೂ ನಿಮ್ಮ ಮಾತಿನಿಂದಲೇ ಎಲ್ಲರನ್ನೂ ಗೆಲ್ಲಲಿದ್ದೀರಿ. ವಿದ್ಯಾರ್ಥಿಗಳಿಗೆ ಹೊಸದನ್ನು ಕಲಿಯುವ ಆಸಕ್ತಿ ಹೆಚ್ಚಲಿದೆ. ಸಂಪತ್ತು ವೃದ್ಧಿಯಾಗಲಿದ್ದು, ಅಂದುಕೊಂಡ ಕೆಲಸಗಳನ್ನು ಪೂರ್ತಿ ಮಾಡಲಿದ್ದೀರಿ.ಮಿಥುನ: ಹೆಚ್ಚಿನ ಧನಸಂಗ್ರಹಣೆಗಾಗಿ ಕ್ರಿಯಾತ್ಮಕವಾಗಿ ಕೆಲಸ ಮಾಡಬೇಕಾಗುತ್ತದೆ. ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಅನಿರೀಕ್ಷಿತವಾಗಿ ಉನ್ನತ ಸ್ಥಾನಕ್ಕೇರುವ