ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಅನಿರೀಕ್ಷಿತವಾಗಿ ದೇಹಾರೋಗ್ಯದಲ್ಲಿ ಉಂಟಾಗುವ ಏರುಪೇರುಗಳು ತಲ್ಲಣವುಂಟು ಮಾಡೀತು. ಸಂಗಾತಿಯ ಸಹಕಾರವಿರಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳಾದೀತು. ಕಾರ್ಯನಿಮಿತ್ತ ಓಡಾಟ ನಡೆಸಲಿದ್ದೀರಿ.ವೃಷಭ: ದೂರದ ಸಂಬಂಧಿಕರನ್ನು ಭೇಟಿಯಾಗಲಿದ್ದೀರಿ. ಕೌಟುಂಬಿಕವಾಗಿ ನೆಮ್ಮದಿಯ ದಿನಗಳು. ಪ್ರೀತಿ ಪಾತ್ರರೊಂದಿಗೆ ಸುಂದರ ಕ್ಷಣ ಕಳೆಯಲಿದ್ದೀರಿ. ವೃತ್ತಿರಂಗದಲ್ಲಿ ಹೊಸ ಬದಲಾವಣೆಗೆ ಸಿದ್ಧರಾಗಿ. ತಾಳ್ಮೆ, ಸಂಯಮವಿರಲಿ.ಮಿಥುನ: ಯಾವುದೇ ವಿಚಾರವಾದರೂ ಸರಿಯಾಗಿ ಪರಾಮರ್ಶಿಸಿ ಮುನ್ನಡೆಯುವುದು ಉತ್ತಮ. ಹಳೆಯ ಬಾಕಿ ಹಣ ತೀರಿಸಲು ಮುಂದಾಗಲಿದ್ದೀರಿ.