ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಬಹುದಿನಗಳಿಂದ ಕಾಡುತ್ತಿದ್ದ ಚಿಂತೆಗೆ ಪರಿಹಾರ ಕಂಡುಕೊಂಡ ನೆಮ್ಮದಿ ನಿಮ್ಮದಾಗಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳಾದೀತು. ಆದರೆ ಸಂಗಾತಿಯ ಸಹಕಾರ ಮನಸ್ಸಿಗೆ ನೆಮ್ಮದಿ ಕೊಡುವುದು. ಅನಗತ್ಯ ಚಿಂತೆ ಬೇಡ.ವೃಷಭ: ಮಹಿಳೆಯರಿಂದ ನಿಮ್ಮ ಸುಖ-ಸಂತೋಷ ಇಮ್ಮಡಿಯಾಗಲಿದೆ. ವ್ಯಾಪಾರಿಗಳಿಗೆ ಧನಲಾಭವಾದೀತು. ನೆರೆಹೊರೆಯವರ ಚಾಡಿಮಾತುಗಳನ್ನು ಅಲಕ್ಷಿಸುವುದು ಉತ್ತಮ. ದೇವತಾ ಪ್ರಾರ್ಥನೆ ಮಾಡಿ.ಮಿಥುನ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ವೈಯಕ್ತಿಕ ಜೀವನದಲ್ಲಿ ಪ್ರಗತಿ