ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ವಾತಾವರಣ ಬದಲಾವಣೆಯಿಂದ ದೇಹಾರೋಗ್ಯದಲ್ಲಿ ಏರುಪೇರಾದೀತು. ಹೊಸ ಜನರ ಭೇಟಿ ಮನಸ್ಸಿಗೆ ಸಂತೋಷ ಕೊಡಲಿದೆ. ಆಪ್ತರೊಂದಿಗೆ ಕಿರು ಸಂಚಾರ ಮಾಡಲಿದ್ದೀರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ.ವೃಷಭ: ಸಣ್ಣ ಪುಟ್ಟ ವಿಚಾರಕ್ಕೆ ಕೋಪ ಮಾಡಿಕೊಳ್ಳಬೇಡಿ. ಕೌಟುಂಬಿಕವಾಗಿ ಹೊಂದಾಣಿಕೆ ಕಾಪಾಡಿಕೊಳ್ಳುವ ಜವಾಬ್ಧಾರಿ ನಿಮ್ಮದಾಗುವುದು. ಆರ್ಥಿಕವಾಗಿ ಹಣಕಾಸಿನ ಹರಿವಿದ್ದರೂ ಖರ್ಚು ವೆಚ್ಚಗಳಾಗಲಿವೆ. ದೇವತಾ ಪ್ರಾರ್ಥನೆ ಮಾಡಿ.ಮಿಥುನ: ಬಹುದಿನಗಳ ನಂತರ ಆಪ್ತ ಮಿತ್ರರ ಭೇಟಿಯಾದ ಸಂತೋಷ ನಿಮ್ಮದಾಗುವುದು.