ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನ ಸಿಗದೇ ನಿರಾಶೆಯಾದೀತು. ಆರ್ಥಿಕ ಯೋಜನೆಗಳ ಬಗ್ಗೆ ದಂಪತಿಗಳ ನಡುವೆ ವೈಮನಸ್ಯಗಳಾದೀತು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗದ ಯೋಗ. ತಾಳ್ಮೆ, ಸಂಯಮವಿರಲಿ.ವೃಷಭ: ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಶುಭವಾಗುವುದು. ಶೈಕ್ಷಣಿಕ ರಂಗದಲ್ಲಿ ಉನ್ನತ ಸ್ಥಾನ ಮಾನದ ಯೋಗ. ಕೃಷಿಕರಿಗೆ ಬೆಳೆ ನಷ್ಟದಿಂದ ಸಂಕಷ್ಟ ಎದುರಾಗವುದು.ಮಿಥುನ: ವೃತ್ತಿರಂಗದಲ್ಲಿ ಸಹೋದ್ಯೋಗಿಗಳಿಂದ ಪೈಪೋಟಿ ಎದುರಾದೀತು. ಕಾರ್ಯಸಾಧನೆಗೆ ಕಠಿಣ ಪರಿಶ್ರಮ