ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಉದ್ಯೋಗ ನಿಮಿತ್ತ ಪರ ಸ್ಥಳಗಳಿಗೆ ಸಂಚಾರ ಮಾಡುವ ಅನಿವಾರ್ಯತೆ ಎದುರಾಗಲಿದೆ. ನೀವು ಮಾಡಿದ ಕೆಲಸಗಳು ಇತರರ ಮೆಚ್ಚುಗೆ ಪಾತ್ರವಾಗಲಿದೆ. ಹಣಕಾಸಿನ ಹರಿವಿಗೆ ತೊಂದರೆಯಿರದು. ಚಿಂತೆ ಬೇಡ.ವೃಷಭ: ನಿಮ್ಮದಲ್ಲದ ವಿಚಾರಗಳ ಬಗ್ಗೆ ಅನಗತ್ಯವಾಗಿ ತಲೆಕೆಡಿಸಿಕೊಂಡು ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ. ಸಂಬಂಧಗಳನ್ನು ಸೂಕ್ಷ್ಮವಾಗಿ ನಿಭಾಯಿಸಬೇಕಾಗುತ್ತದೆ. ಸಂಗಾತಿಯ ಸಹಕಾರ ಸಿಗುವುದು.ಮಿಥುನ: ಭವಿಷ್ಯದ ನಿಟ್ಟಿನಲ್ಲಿ ದೊಡ್ಡ ಯೋಜನೆಗಳನ್ನು ಹಾಕಿಕೊಳ್ಳಲಿದ್ದೀರಿ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು.