ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನೀವು ಮಾಡುವ ಕೆಲಸ ನಿಮಗೆ ತೃಪ್ತಿಕೊಡಲಿದೆ. ಬೇರೆಯವರ ಅಭಿಪ್ರಾಯಗಳಿಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ವಾಹನ ರಿಪೇರಿಗಾಗಿ ಸಣ್ಣ ಪುಟ್ಟ ಖರ್ಚುಗಳಾದೀತು. ಮನೆಯಲ್ಲಿ ಶುಭ ಕಾರ್ಯ ನಡೆಸಲು ಸಿದ್ಧತೆ ನಡೆಸುವಿರಿ.ವೃಷಭ: ಹಿರಿಯರಿಗೆ ಪುಣ್ಯ ಕ್ಷೇತ್ರಗಳ ಸಂದರ್ಶನ ಯೋಗ ಕೂಡಿಬರಲಿದೆ. ವಾಹನಾದಿ ಸೌಕರ್ಯಗಳು ಶೀಘ್ರದಲ್ಲೇ ನಿಮ್ಮದಾಗಲಿದೆ. ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ನೀಡಲು ಮುಂದಾಗಲಿದ್ದೀರಿ. ತಾಳ್ಮೆಯಿರಲಿ.ಮಿಥುನ: ನಿಮ್ಮ ಸಮೀಪವರ್ತಿಗಳಿಗೆ ಸಮಸ್ಯೆಗಳು ಬಂದಾಗ ನೆರವಿಗೆ ಮುಂದಾಗಲಿದ್ದೀರಿ.