ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಹಳೆಯ ಮಿತ್ರರ ಸಮಾಗಮವಾಗಲಿದೆ. ಆಹಾರೋದ್ಯಮಿಗಳಿಗೆ ಆರ್ಥಿಕವಾಗಿ ಲಾಭವಾಗಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಕಕರಿಂದ ಮೆಚ್ಚುಗೆ ಸಿಗುವುದು. ಬಾಕಿ ಹಣ ವಸೂಲಾತಿ ಚಿಂತೆ ಕಾಡೀತು. ಆದರೆ ಭರವಸೆ ಕಳೆದುಕೊಳ್ಳಬೇಡಿ.ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಸಹಾಯ ಒದಗಿಬರಲಿದೆ. ಸಹೋದರರೊಂದಿಗಿನ ಅಸಮಾಧಾನಗಳು ದೂರವಾಗಲಿದೆ. ಇಷ್ಟಾರ್ಥ ಸಿದ್ಧಿಗಾಗಿ ದೇವರ ಪ್ರಾರ್ಥನೆ ಮಾಡುವುದು ಉತ್ತಮ. ತಾಳ್ಮೆ, ಸಂಯಮವಿರಲಿ.ಮಿಥುನ: ನೂತನ ಕೆಲಸದಲ್ಲಿ ತೊಡಗಿಸಿಕೊಳ್ಳುವ ಮೊದಲು ಶನಿದೇವರ ಪ್ರಾರ್ಥನೆ ಮಾಡಿ ಮುನ್ನಡೆಯಿರಿ.