ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನಿರ್ಧಾರ ತೆಗೆದುಕೊಳ್ಳುವುದು ಅತ್ಯಂತ ಪ್ರಯಾಸದ ಕೆಲಸವೆನಿಸಲಿದೆ. ಕೌಟುಂಬಿಕವಾಗಿ ತೂಗಗತ್ತಿಯ ಮೇಲೆ ನಡೆಯುವ ಪರಿಸ್ಥಿತಿ ನಿಮ್ಮದು. ಅನ್ಯರ ವಿಚಾರಗಳಿಗೆ ಸಂಗಾತಿಯೊಂದಿಗೆ ಕಲಹವಾಗದಂತೆ ನೋಡಿಕೊಳ್ಳಿ.ವೃಷಭ: ನಿಮ್ಮ ಕನಸು ಈಡೇರಿಕೆಗೆ ಸತತ ಪ್ರಯತ್ನ ಪಡಬೇಕಾಗುತ್ತದೆ. ಆರ್ಥಿಕವಾಗಿ ಒಳ್ಳೆಯ ಉದ್ದೇಶಗಳಿಗೆ ಖರ್ಚು ವೆಚ್ಚ ಮಾಡಲಿದ್ದೀರಿ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗುವುದು. ಕಾರ್ಯನಿಮಿತ್ತ ಓಡಾಟ ನಡೆಸಲಿದ್ದೀರಿ.ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಪಾರದರ್ಶಕತೆಗೆ ಒತ್ತು ನೀಡಿ. ಹಣಕಾಸಿನ ಲೆಕ್ಕಾಚಾರಗಳು