ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಅನಿರೀಕ್ಷಿತವಾಗಿ ದೂರ ಪ್ರಯಾಣ ಮಾಡಬೇಕಾಗಿ ಬರಲಿದೆ. ಮನಸ್ಸಲ್ಲಿ ಕೊರೆಯುತ್ತಿರುವ ವಿಚಾರಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳುವುದು ಉತ್ತಮ. ಆರ್ಥಿಕವಾಗಿ ಖರ್ಚು ವೆಚ್ಚಗಳಾಗಲಿವೆ.ವೃಷಭ: ನಿಮ್ಮ ನೆಮ್ಮದಿ ನಿಮ್ಮ ಕೈಯಲ್ಲೇ ಇದೆ. ಅನಗತ್ಯ ವಿಚಾರಗಳಿಗೆ ಮೂಗು ತೂರಿಸಲು ಹೋಗಬೇಡಿ. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಹೆಚ್ಚಿನ ಪರಿಶ್ರಮವಿಲ್ಲದೇ ಫಲ ಸಿಗದು. ಎಚ್ಚರಿಕೆ ಅಗತ್ಯ.ಮಿಥುನ: ವ್ಯವಹಾರದಲ್ಲಿ ಧಾರಾಳತನ ಪ್ರದರ್ಶಿಸಲಿದ್ದೀರಿ. ಮನೆಯಲ್ಲಿ ಗುರುಹಿರಿಯರ ಮಾತಿಗೆ ಕಿವಿಗೊಡುವುದು ಉತ್ತಮ.