ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಪ್ರೀತಿ ಪಾತ್ರರೊಂದಿಗೆ ಸುಂದರ ಕ್ಷಣ ಕಳೆಯುವ ಯೋಗ ನಿಮ್ಮದಾಗಲಿದೆ. ನಾಲಿಗೆ ಚಪಲದ ಮೇಲೆ ಕಡಿವಾಣವಿರಲಿ. ನೂತನ ಮಿತ್ರರನ್ನು ಸಂಪಾದಿಸಲಿದ್ದೀರಿ. ದೂರ ಪ್ರಯಾಣಕ್ಕೆ ಸಿದ್ಧತೆ ನಡೆಸುವಿರಿ.ವೃಷಭ: ಆರ್ಥಿಕ ವಿಚಾರದಲ್ಲಿ ಸ್ತ್ರೀಯರಿಂದ ಸಹಾಯ ಸಿಗಲಿದೆ. ಮನೆಯ ಸಣ್ಣಪುಟ್ಟ ರಿಪೇರಿ ಕೆಲಸಗಳಿಗೆ ಖರ್ಚು ವೆಚ್ಚಗಳಾದೀತು. ಹಿರಿಯರಿಗೆ ಪುಣ್ಯ ಕ್ಷೇತ್ರಗಳಿಗೆ ಸಂದರ್ಶನ ಮಾಡುವ ಯೋಗ ಕೂಡಿಬರುವುದು.ಮಿಥುನ: ವೈಯಕ್ತಿಕ ಸುಖಕ್ಕಿಂತ ಪರರ ಹಿತದ ಕಡೆಗೆ ಗಮನ