ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಉದ್ಯೋಗ ಕ್ಷೇತ್ರದಲ್ಲಿ ನಾಯಕತ್ವ ವಹಿಸುವ ಅವಕಾಶಗಳು ನಿಮ್ಮದಾಗಲಿದೆ. ಮನೆಯಲ್ಲಿ ಸಣ್ಣ ಪುಟ್ಟ ರಿಪೇರಿ ಕೆಲಸಗಳಿಗೆ ಖರ್ಚು ವೆಚ್ಚಗಳಾದೀತು. ನೆರೆಹೊರೆಯವರ ಚಾಡಿ ಮಾತುಗಳನ್ನು ಅಲಕ್ಷಿಸುವುದು ಒಳಿತು.ವೃಷಭ: ದೇಹಾರೋಗ್ಯದಲ್ಲಿ ಬರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಅಲಕ್ಷಿಸದಿರಿ. ಹಿರಿಯರ ಸಲಹೆಗಳು ಉಪಯೋಗಕ್ಕೆ ಬರಲಿವೆ. ಯೋಗ್ಯ ವಯಸ್ಕರು ಸೂಕ್ತ ಸಂಬಂಧಕ್ಕೆ ಕೆಲವು ದಿನ ಕಾಯುವುದು ಒಳಿತು. ತಾಳ್ಮೆಯಿರಲಿ.ಮಿಥುನ: ನಿಮ್ಮ ಗುಣ ಸ್ವಭಾವಕ್ಕೆ