ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಮಹಾತ್ವಾಂಕಾಕ್ಷಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಮುಂದಾಗಲಿದ್ದೀರಿ. ಕಾರ್ಯಕ್ಷೇತ್ರಗಳಲ್ಲಿ ಅಡೆತಡೆಗಳಿದ್ದರೂ ಅಂತಿಮ ಜಯ ನಿಮ್ಮದಾಗಲಿದೆ. ಹೊಸ ಕೆಲಸಕ್ಕೆ ಪ್ರಯತ್ನ ನಡೆಸಲಿದ್ದೀರಿ.ವೃಷಭ: ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೆಲವೊಂದು ಯೋಜನೆ ಹಾಕಿಕೊಳ್ಳಬೇಕಾಗುತ್ತದೆ. ಧನಗಳಿಕೆ ಚಿಂತೆಗೆ ಕಾರಣವಾಗಲಿದೆ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಪಡೆಯಲಿದ್ದೀರಿ. ಖರ್ಚು ವೆಚ್ಚಗಳ ಬಗ್ಗೆ ಎಚ್ಚರವಿರಲಿ.ಮಿಥುನ: ನೆರೆಹೊರೆಯವರೊಂದಿಗೆ ನಿಮ್ಮ ವ್ಯವಹಾರ ಬೆಣ್ಣೆಯಲ್ಲಿ ಕೂದಲು ತೆಗೆದಂತಿರಬೇಕು. ಕ್ರಿಯಾತ್ಮಕ ಯೋಚನೆಗಳಿಂ ಇತರರನ್ನು ಆಕರ್ಷಿಸಲಿದ್ದೀರಿ.