ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಉದ್ಯೋಗ ಸಂಬಂಧವಾದ ಕಾಗದ ಪತ್ರಗಳನ್ನು ಜೋಪಾನವಾಗಿಟ್ಟುಕೊಳ್ಳಿ. ಸಂಗಾತಿಯೊಂದಿಗೆ ಮುಕ್ತವಾಗಿ ಮನಸ್ಸಿನ ಮಾತು ಹಂಚಿಕೊಳ್ಳುವುದರಿಂದ ಹಗುರವಾಗಲಿದ್ದೀರಿ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.ವೃಷಭ: ವೃತ್ತಿರಂಗದಲ್ಲಿ ಸದವಕಾಶಗಳು ಬಂದಾಗ ಸರಿಯಾಗಿ ಬಳಸಿಕೊಳ್ಳಿ. ಸಾಮಾಜಿಕವಾಗಿ ನಿರೀಕ್ಷಿತ ಸ್ಥಾನ ಮಾನ ಗೌರವಾದಿಗಳು ಲಭ್ಯವಾಗಲಿದೆ. ಧನಾದಾಯ ಹೆಚ್ಚು ಮಾಡಲು ಹೊಸ ದಾರಿಗಳನ್ನು ಕಂಡುಕೊಳ್ಳಲಿದ್ದೀರಿ.ಮಿಥುನ: ಮನೆಯಲ್ಲಿ ಸಣ್ಣ ಪುಟ್ಟ ಬದಲಾವಣೆಗಳು ಕಂಡುಬರಲಿದೆ. ಸಹೋದರಾದಿಗಳೊಂದಿಗಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲು ಮುಂದಾಗಲಿದ್ದೀರಿ.