ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಸರಕಾರಿ ಲೆಕ್ಕಪತ್ರಗಳ ಬಗ್ಗೆ ನಿಗಾ ವಹಿಸಿ. ಸಂಗಾತಿಯ ಕೆಲವೊಂದು ಮಾತುಗಳು ಮನಸ್ಸಿನಲ್ಲಿ ಹೊಸ ಚಿಂತನೆ ಹುಟ್ಟುಹಾಕಲಿದೆ. ನಿಮ್ಮ ಪ್ರಯಾಣದ ಯೋಜನೆಯಲ್ಲಿ ದಿಡೀರ್ ಬದಲಾವಣೆಗಳಾದೀತು. ತಾಳ್ಮೆಯಿರಲಿ.ವೃಷಭ: ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಮನೆಗೆ ಅನಿರೀಕ್ಷಿತವಾಗಿ ನೆಂಟರಿಷ್ಟರ ಆಗಮನವಾಗುವ ಸಾಧ್ಯತೆಯಿದೆ. ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿವೆ.ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಏಳಿಗೆಗೆ ಅಡ್ಡಿಯಾಗುವವರ ಹುನ್ನಾರಗಳು ಬಯಲಾಗಲಿದೆ. ಇಷ್ಟ ಮಿತ್ರರೊಂದಿಗೆ