ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನಿಮ್ಮ ಮನಸ್ಸಿನಲ್ಲಿ ಕೊರೆಯುತ್ತಿರುವ ಯೋಚೆನಗಳಿಂದ ಸಾಂಸಾರಿಕವಾಗಿ ನೆಮ್ಮದಿ ಹಾಳಾದೀತು. ತಾಳ್ಮೆ, ಸಂಯಮ ಅಗತ್ಯ. ಸಂಪತ್ತು, ಧನಾದಾಯ ವೃದ್ಧಿಗೆ ಹೊಸ ದಾರಿಗಳನ್ನು ಹುಡುಕಲಿದ್ದೀರಿ.ವೃಷಭ: ನಿಮ್ಮ ಹೊಸ ಪ್ರಯತ್ನಗಳಿಗೆ ಮನೆಯವರ ಸಾಥ್ ಸಿಗಲಿದೆ. ಭೂಮಿ ಖರೀದಿ ವ್ಯವಹಾರದಲ್ಲಿ ಲೆಕ್ಕಪತ್ರಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.ಮಿಥುನ: ಸರಕಾರಿ ಉದ್ಯೋಗಿಗಳಿಗೆ ಬಿಡುವಿನ ದಿನದ ಖುಷಿ ಸಿಗುವುದು.