ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ವಿಶೇಷವಾದ ವ್ಯಕ್ತಿಗಳನ್ನು ಭೇಟಿಯಾಗುವ ಯೋಗ ನಿಮ್ಮದಾಗಲಿದೆ. ಹಳೆಯ ತಪ್ಪುಗಳಿಂದ ಪಾಠ ಕಲಿಯಲಿದ್ದೀರಿ. ಮಕ್ಕಳ ವಿಚಾರದಲ್ಲಿ ಸಂಗಾತಿಯೊಂದಿಗೆ ಸಣ್ಣ ಪುಟ್ಟ ಘರ್ಷಣೆಯಾದೀತು. ತಾಳ್ಮೆ, ಸಂಯಮ ಅಗತ್ಯ.ವೃಷಭ: ಮಾನಸಿಕವಾಗಿ ಕಾಡುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ಕಂಡುಬರಲಿದೆ. ಮಹಿಳೆಯರಿಗೆ ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ವೈಯಕ್ತಿಕ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಚಿಂತೆ ಬೇಡ.ಮಿಥುನ: ಮನಸ್ಸಿನ ಆಸೆಗಳನ್ನು ಅದುಮಿಟ್ಟುಕೊಳ್ಳುವ ಪ್ರಯತ್ನ ಮಾಡಲಿದ್ದೀರಿ. ಪ್ರೇಮಿಗಳಿಗೆ ಮಿಶ್ರಫಲವಿರಲಿದೆ. ನಿರುದ್ಯೋಗಿಗಳ