ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಹಿರಿಯರಿಂದ ಬಂದ ಬಳವಳಿ ಸಂರಕ್ಷಿಸುವ ಹೊಣೆಗಾರಿಕೆ ನಿಮ್ಮ ಮೇಲಿರಲಿದೆ. ಗಣ್ಯರ ಸಂಪರ್ಕದಿಂದ ನಿಮ್ಮ ಕೆಲಸ ಸುಲಭವಾಗಲಿದೆ. ಇಷ್ಟದೇವರ ಪ್ರಾರ್ಥನೆ ಮಾಡಿ ದಿನದಾರಂಭ ಮಾಡಿದರೆ ಎಲ್ಲವೂ ಶುಭವಾಗಲಿದೆ.ವೃಷಭ: ಸ್ವಸಾಮರ್ಥ್ಯದಿಂದ ಧನ ಸಂಪಾದನೆ ಮಾಡಲಿದ್ದೀರಿ. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ವ್ಯಾಪಾರಿಗಳಿಗೆ ಹಿತಶತ್ರುಗಳ ಕಾಟ ಕಂಡುಬಂದೀತು. ಕ್ರಿಯಾತ್ಮಕ ಕೆಲಸಗಳಿಗೆ ಜನಮನ್ನಣೆ ಸಿಗಲಿದೆ.ಮಿಥುನ: ನಿಮ್ಮ ಕೆಲಸಗಳಿಗೆ ಬಂಧು ಮಿತ್ರರ ಸಹಕಾರ ಕಂಡುಬರಲಿದೆ.