ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಸುದೀರ್ಘ ಪ್ರಯಾಣ ಮಾಡುವಾಗ ಅನಾಹುತಗಳಾಗುವ ಅಪಾಯವಿದೆ. ಎಚ್ಚರಿಕೆ ಅಗತ್ಯ. ಸಾಂಸಾರಿಕವಾಗಿ ಆಡಿದ ಮಾತಿಗೆ ಪಶ್ಚಾತ್ತಾಪಡುವ ಸಂದರ್ಭಗಳು ಎದುರಾದೀತು. ಹೊಸ ಜನರ ಭೇಟಿಯಿಂದ ಕಾರ್ಯಸಾಧನೆಯಾಗಲಿದೆ.ವೃಷಭ: ನಿಮ್ಮ ನಿರ್ಧಾರಗಳು ಸರಿ ಎನ್ನುವ ಅತಿಯಾದ ಆತ್ಮವಿಶ್ವಾಸದಲ್ಲಿರುತ್ತೀರಿ. ಕೌಟುಂಬಿಕವಾಗಿ ಹೆಚ್ಚಿನ ಜವಾಬ್ಧಾರಿಗಳನ್ನು ಹೊರಬೇಕಾಗುತ್ತದೆ. ಹಿರಿಯರಿಗೆ ಪುಣ್ಯ ಕ್ಷೇತ್ರಗಳ ಸಂದರ್ಶನ ಯೋಗ.ಮಿಥುನ: ಎಷ್ಟೋ ದಿನದಿಂದ ಬಾಕಿಯಿದ್ದ ಹರಕೆ ತೀರಿಸಲು ಮುಂದಾಗಲಿದ್ದೀರಿ. ಇಷ್ಟ ಮಿತ್ರರನ್ನು ಭೇಟಿಯಾಗುವ ಯೋಗ.